ಬ್ಯಾಂಕ್ ಸಿಬ್ಬಂದಿಗೆ ತಲೆನೋವು

PH 04
Published on

ಕಾಳಗಿ: ಸರ್ಕಾರದ ಪಂಚ ಗ್ಯಾರಂಟಿಗಳ ಪ್ರಭಾವದಿಂದ ತಾಲೂಕಿನ ಬಹಳಷ್ಟು ಗ್ರಾಮಸ್ಥರು ಪಟ್ಟಣದ ಎಸ್‌ಬಿಐ ಎದುರು ಸರದಿ ನಿಲ್ಲುವುದು ಸಾಮಾನ್ಯವಾಗಿದೆ.

ತಮ್ಮ ಖಾತೆಗಳಿಗೆ ಆಧಾರ್ ಲಿಂಕ್ ಇಲ್ಲದ ಪ್ರಯುಕ್ತ ಸರ್ಕಾರಿ ಸೌಲಭ್ಯ ಎಲ್ಲಿ ಕೈಗೆಟಕುವುದಿಲ್ಲವೆಂಬ ಆತಂಕದಿಂದ ಜನದಟ್ಟಣೆ ವಿಪರೀತವಾಗಿ ಬ್ಯಾಂಕ್ ಸಿಬ್ಬಂದಿಗೆ ದಿಕ್ಕು ತೋಚದಂತಾಗಿದೆ. ನಿತ್ಯ 300 ಜನರ ಆಧಾರ್ ಲಿಂಕ್ ಮಾಡುತ್ತಿದ್ದರೂ ಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆ ಹಾಗೂ ಇಂಟರ್‌ನೆಟ್, ಸರ್ವರ್ ಸಮಸ್ಯೆಯಿಂದ ಲಿಂಕ್ ಮಾಡಲು ನಿಯೋಜಿತ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

ಹೆಚ್ಚು ಹಣಕಾಸಿನ ವ್ಯವಹಾರ ಇರುವ ಈ ಬ್ಯಾಂಕ್ ಕೇವಲ ಒಂದು ಶಾಖೆ ಹೊಂದಿದೆ. ಪಟ್ಟಣ ಸೇರಿ ವಿವಿಧ ಗ್ರಾಮಗಳ ಹೆಚ್ಚಿನ ಜನರು ಗ್ರಾಹಕರಾಗಿದ್ದು, ನಿತ್ಯ ಬರುವುದು ಸಹಜ. ಬ್ಯಾಂಕಿನ ಮೇಲಧಿಕಾರಿಗಳು ಆದಷ್ಟು ಬೇಗ ಶಾಖೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಮೂಲಕ ಸಾರ್ವಜನಿಕರ ತೊಂದರೆಗಳನ್ನು ಎಷ್ಟರ ಮಟ್ಟಿಗೆ ನಿಭಾಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net