ಕಲಬುರಗಿ: ಜಿಲ್ಲೆಯ ಕೃಷ್ಣಾ ಭೀಮಾ ಸಮೃದ್ಧಿ ಲೋಕಲ್ ಏರಿಯಾ (ಕೆಬಿಎಸ್) ಬ್ಯಾಂಕ್ನ ಖಾಯಂ ಸಿಬ್ಬಂದಿ ಮೇಲೆ ೧೫&೨೦ ರ‍್ಷದಿಂದ ಆಡಳಿತ ಮಂಡಳಿಯವರು ಕಿರುಕುಳ ನೀಡುತ್ತಿದ್ದು, ಕೆಲಸ ಬಿಟ್ಟು ಹೋಗುವಂತ ಸ್ಥಿತಿ ನರ‍್ಮಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ರ‍್ನಾಟಕ ಯುವ ಶಕ್ತಿ ಸೈನ್ಯದ ಅಧ್ಯಕ್ಷ ಲಿಂಗರಾಜ ಗುಂಡೂರಕರ್ ಆಗ್ರಹಿಸಿದರು.
ಆಂದ್ರ ಮೂಲದ ಈ ಬ್ಯಾಂಕ್ನಲ್ಲಿ ನುರಿತ ಸಿಬ್ಬಂದಿಗೆ ಬಡ್ತಿ ನೀಡುತ್ತಿಲ್ಲ, ಉದ್ದೇಶಪರ‍್ವಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿಯಮ ಉಲ್ಲಂಘಿಸಿ ಬಡ್ತಿ ನೀಡುತ್ತಿದ್ದಾರೆ. ಅನ್ಯಾಯ ಪ್ರಶ್ನಿಸಿದ ಸಿಬ್ಬಂದಿಯನ್ನು ಬೇರೆ ರಾಜ್ಯಕ್ಕೆ ರ‍್ಗಾವಣೆ, ಕಿರುಕುಳ ನೀಡಿ ಕೆಲಸ ಬಿಟ್ಟು ಹೋಗುವಂತೆ ಮಾಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಶ್ನಿಸುವವರನ್ನು ಟರ‍್ಗೆಟ್ ಮಾಡಿ, ಒತ್ತಡ ಹೇರುತ್ತಾರೆ. ಟಿ.ಎ, ಡಿಎ ಕೊಡುತ್ತಿಲ್ಲ. ವೇತನ ತಡೆಹಿಡಿಯುತ್ತಿದ್ದಾರೆ. ಆಡಳಿತ ಮಂಡಳಿ ಕಿರುಕುಳಕ್ಕೆ ೨೦೨೪ ಸೆಪ್ಟೆಂಬರ್ ೨೮ರಂದು ಗಂಗಮ್ಮ ಸಿರಡೋಣ ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಖ್ಯ ಆರೋಪಿಗಳನ್ನು ಬಿಟ್ಟು ಸಾಮನ್ಯ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ಮುಖ್ಯ ಆರೋಪಿಗಳನ್ನು ಕೈ ಬಿಟ್ಟಿದ್ದಾರೆ. ಕೂಡಲೇ ಗಂಗಮ್ಮ ಕುಟುಂಬಕ್ಕೆ ೫೦ ಲಕ್ಷ ರೂ. ಪರಿಹಾರ ನೀಡಬೇಕು, ಆಯಾ ಜಿಲ್ಲೆಯಲ್ಲೇ ಸಿಬ್ಬಂದಿಯನ್ನು ರ‍್ಗಾಯಿಸಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್ ರ‍್ಥಿಕ ಸ್ಥಿತಿ ಹದಗೆಟ್ಟಿದೆ. ಎಲ್ಲ ಬೇಡಿಕೆ ಈಡೇರಿಸದಿದ್ದರೆ ಜಿಲ್ಎಲಯ ಕಲಬುರಗಿ, ಕಮಲಾಪುರ, ಚಿಂಚೋಳಿ, ಚೌಡಾಪುರ, ಆಳಂದ ಶಾಖೆಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
ಅಶ್ವತಕುಮಾರ ಮಾಡ್ಯಾಳಕರ್, ದಯಾನಂದ ಅಂಕಲಗಿ, ಪ್ರಕಾಶ ಜಮಾದಾರ ಇತರರಿದ್ದರು.