

ಮೈಸೂರು: ಬ್ಲಾಕ್ ಆಗಿದ್ದ ವ್ಯಾಟ್ಸ್‌ಆ್ಯಪ್ ಓಪನ್ ಮಾಡಿದ ನಂತರದಲ್ಲಿ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಸುಮಾರು 2 ಲಕ್ಷ ರೂ. ಕಡಿತವಾಗಿದೆ ಎಂದು ಮೈಸೂರಿನ ರೈಲ್ವೆ ಉದ್ಯೋಗಿಯೊಬ್ಬರು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವ್ಯಾಟ್ಸ್‌ಆ್ಯಪ್ ಬ್ಲಾಕ್ ಆಗಿತ್ತು. ಅದನ್ನು ಓಪನ್ ಮಾಡಲು ಮುಂದಾದಾಗ ಮೊಬೈಲ್ ಸಂಖ್ಯೆ ನಮೂದಿಸುವಂತೆ ಸೂಚಿಸಲಾಯಿತು. ಹಾಗೆಯೇ ಮೊಬೈಲ್ ಸಂಖ್ಯೆ ನಮೂದಿಸಿದಾಗ ಒಟಿಪಿ ಆಟೋ ಜನರೇಟ್ ಆಗಿ ನಂತರ ವ್ಯಾಟ್ಸ್‌ಆ್ಯಪ್ ಓಪನ್ ಆಯಿತು.
ಆದರೆ ಬ್ಯಾಂಕ್ ಖಾತೆಯಿಂದ 5 ಬಾರಿ ಒಟ್ಟು 1,96,603 ರೂ. ಕಡಿತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.