ಬ್ಯಾಂಕ್ ಖಾತೆ ಮಾಹಿತಿ ನೀಡಬೇಡಿ

jyp bank
ಜಯಪುರದ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬ್ಯಾಂಕಿಂಗ್ ಸೌಲಭ್ಯಗಳು ಹಾಗೂ ಸುರಕ್ಷತೆ ವಿಷಯದ ಕುರಿತು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಗಣೇಶ್ ಶೆಟ್ಟಿ ಮಾತನಾಡಿದರು. ಪ್ರಾಚಾರ್ಯರಾದ ಡಾ. ಮುಷ್ತಾಕ್ ಅಹಮದ್, ಸುದರ್ಶನ್ ಹೆಗ್ಡೆ, ಆದರ್ಶ ವಿ. ಭಟ್ ಇದ್ದರು.
Published on

ಜಯಪುರ: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಅಪರಾಧಗಳು ಹೆಚ್ಚಾಗುತ್ತಿವೆ. ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚುತ್ತಿದ್ದಾರೆ. ಖಾತೆದಾರರು ಯಾವುದೇ ಕಾರಣಕ್ಕೂ ಎಟಿಎಂ ಪಿನ್ ಹಾಗೂ ಒಟಿಪಿ ಸಂಖ್ಯೆಯನ್ನು ಯಾರಿಗೂ, ಯಾವುದೇ ಕಾರಣಕ್ಕೂ ನೀಡಬಾರದು ಎಂದು ಜಯಪುರ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಗಣೇಶ್ ಶೆಟ್ಟಿ ಹೇಳಿದರು.

ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಬ್ಯಾಂಕಿಂಗ್ ಸೌಲಭ್ಯಗಳು ಹಾಗೂ ಸುರಕ್ಷತೆ ವಿಷಯದ ಕುರಿತು ಮಾತನಾಡಿದ ಅವರು, ನಿಖರ ಮಾಹಿತಿ ಇರದ ಯಾವುದೇ ಎಪಿಕೆ ೈಲ್‌ಗಳನ್ನು ತೆರೆಯಬಾರದು. ಬ್ಯಾಂಕಿಂಗ್ ಸಂಬಂಧಪಟ್ಟ ಯಾವುದೇ ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಹಾಗೊಂದು ವೇಳೆ ಬ್ಯಾಂಕಿಂಗ್ ಸೈಬರ್ ವಂಚನೆಗೆ ಒಳಗಾದರೆ, ಗ್ರಾಹಕರು ತಕ್ಷಣ 1930 ಸಹಾಯವಾಣಿಗೆ ಕರೆಮಾಡಿ ದೂರು ದಾಖಲಿಸಬೇಕು ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 18 ರಿಂದ 70 ವರ್ಷ ವಯಸ್ಸಿನ ಎಲ್ಲ ಉಳಿತಾಯ ಬ್ಯಾಂಕ್ ಖಾತೆದಾರರಿಗೆ 20 ರೂ. ಅತ್ಯಂತ ಕಡಿಮೆ ವಾರ್ಷಿಕ ಪ್ರೀಮಿಯಂನಲ್ಲಿ 2,00,000 ರೂ. ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಘೋಷಿಸಿದೆ. ಬ್ಯಾಂಕ್ ಉಳಿತಾಯ ಖಾತೆ ಗ್ರಾಹಕರು ವಿಮೆ ಮಾಡಿಸಿಕೊಳ್ಳಬಹುದು ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ಮುಷ್ತಾಕ್ ಅಹಮದ್, ಉಪನ್ಯಾಸಕರಾದ ಸುದರ್ಶನ್ ಹೆಗ್ಡೆ, ಆದರ್ಶ ವಿ. ಭಟ್ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net