ಬ್ಯಾಂಕಿನ ಪ್ರಗತಿಗಾಗಿ ಶ್ರಮಿಸಿ

5-1 blk 2(2)
ಭಾಲ್ಕಿಯಲ್ಲಿ ಅರ್ಬನ್ ಬ್ಯಾಂಕಿನ ನೂತನ ಅಧ್ಯಕ್ಷ ಶಿವಕುಮಾರ ಕಲ್ಯಾಣೆ ಮತ್ತು ಉಪಾಧ್ಯಕ್ಷ ಸಂಜುಕುಮಾರ ಗುಂಜರಗೆ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸನ್ಮಾನಿಸಿ, ಗೌರವಿಸಿದರು.
Published on

ಭಾಲ್ಕಿ: ಅರ್ಬನ್ ಬ್ಯಾಂಕಿನ ಎಲ್ಲ ಗ್ರಾಹಕರ ಆಶೋತ್ತರಗಳನ್ನು ಈಡೇರಿಸಿ ಬ್ಯಾಂಕು ಪ್ರಗತಿದತ್ತ ಕೊಂಡೊಯುವಂತಾಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಸಚಿವರ ಗೃಹ ಕಚೇರಿಯಲ್ಲಿ ಅರ್ಬನ್ ಬ್ಯಾಂಕಿನ ನೂತನ ಅಧ್ಯಕ್ಷ ಶಿವಕುಮಾರ ಕಲ್ಯಾಣೆ, ಉಪಾಧ್ಯಕ್ಷ ಸಂಜುಕುಮಾರ ಗುಂಜರಗೆ ಅವರನ್ನು ಮಾತನಾಡಿದ ಸಚಿವರು, ವರ್ತಕರು, ಕೃಷಿಕರು, ನೌಕರಸ್ಥರು ಸೇರಿ ಅಗತ್ಯವಿರುವವರಿಗೆ ಅಲ್ಪಾವಧಿ, ಮಧ್ಯಾಮವಧಿ ಸಾಲ ನೀಡಿ, ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸಬೇಕು. ವಿಶೇಷವಾಗಿ ಠೇವಣಿದಾರರಿಂದ ಮತ್ತು ಗ್ರಾಹಕರಿಂದ ನಂಬಿಕೆ ಗಳಿಸಬೇಕು. ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು.

ಸಚಿವ ಈಶ್ವರ ಖಂಡ್ರೆ ನಮ್ಮ ಮೇಲೆ ವಿಶ್ವಾಸವಿಟ್ಟು ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿದ್ದಾರೆ. ಅವರ ನಂಬಿಕೆ ಹುಸಿ ಹೋಗದಂತೆ ಆಡಳಿತ ಮಂಡಳಿಯ ಸರ್ವ ನಿರ್ದೇಶಕರನ್ನು ಹಾಗೂ ಬ್ಯಾಂಕಿನ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಂಕು ಆರ್ಥಿಕವಾಗಿ ಮುಂದುವರೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಬ್ಯಾಂಕ್‌ನ ಅಧ್ಯಕ್ಷ ಶಿವಕುಮಾರ ಕಲ್ಯಾಣೆ ಹಾಗೂ ಉಪಾಧ್ಯಕ್ಷ ಸಂಜುಕುಮಾರ ಗುಂಜರಗೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net