ಬೌದ್ಧಿಕ ಆಸ್ತಿ ಹಕ್ಕುಗಳ ದುರ್ಬಳಕೆ ತಡೆಯಿರಿ

26 vikram 2
Published on

ಧಾರವಾಡ: ಬೌದ್ಧಿಕ ಆಸ್ತಿ ಹಕ್ಕುಗಳು ಬೇರೆ-ಬೇರೆ ರೀತಿಯಲ್ಲಿವೆ. ಕೈಗಾರಿಕಾ ವಿನ್ಯಾಸ, ಸಂಗೀತ ಸಂಯೋಜನೆ, ಸಿನಿಮಾ, ವೈಜ್ಞಾನಿಕ ಸಂಶೋಧನೆಗಳು ಹೀಗೆ ಅನೇಕ ಬಗೆಯಲ್ಲಿರುವ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಮುಖ್ಯವಾಗಿದೆ ಎಂದು ಜನತಾ ಶಿಕ್ಷಣ ಸಮಿತಿ ವಿತ್ತಾಧಿಕಾರಿ ಡಾ. ಅಜಿತಪ್ರಸಾದ ಹೇಳಿದರು.

ಜೆಎಸ್​ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಬೌದ್ಧಿಕ ಹಕ್ಕುಗಳು ವಿಷಯ ಮತ್ತು ಸವಾಲುಗಳು ಕುರಿತ ವೆಬಿನಾರ್ ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರಿನ ಎಸ್​ಬಿಆರ್​ಆರ್ ಮಹಾಜನ್ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಸಂಜಿತ್ ಎಂ.ಎನ್. ಮಾತನಾಡಿ, ಬೌದ್ಧಿಕ ಆಸ್ತಿ ಹಕ್ಕುಗಳು, ಆ ಆಸ್ತಿಯ ಮಾಲೀಕರಿಗೆ ಲಾಭ ಕೊಡಿಸುವುದರ ಜತೆಗೆ ಅವುಗಳನ್ನು ಮತ್ತೊಬ್ಬರು ತಪ್ಪಾಗಿ ಬಳಕೆ ಮಾಡುವುದನ್ನು ತಡೆಗಟ್ಟುತ್ತವೆ. ಸಾಮಾನ್ಯ ಜನರಿಗೂ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಅಗತ್ಯ. ನಿತ್ಯದ ವ್ಯವಹಾರದಲ್ಲಿ ಈ ಹಕ್ಕುಗಳ ಬಳಕೆ ಸಹಜವಾಗಿರುವುದರಿಂದ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದರು.

230ಕ್ಕೂ ಹೆಚ್ಚು ನೋಂದಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು. ಡಾ. ಸೂರಜ ಜೈನ್, ಡಾ. ವೆಂಕಟೇಶ, ಡಾ. ಜಿನದತ್ತ ಹಡಗಲಿ, ಡಾ. ಶೌಕತ್ ಅಲಿ, ಡಾ. ಆರ್.ವಿ. ಪಾಟೀಲ, ಮಂಜುನಾಥ ಮುನವಳ್ಳಿ, ಸೃಜನಾ ಜೋಶಿ, ಶಕುಂತಲಾ ಪಾಟೀಲ, ಸಹನಾ ಹೊಂಗಲ, ಚೇತನಾ ಕೆ, ಮಂಜರಿ ಕೆ., ಐ.ಎಸ್. ಹಳ್ಳಿಕೇರಿ, ಚನ್ನು ನೂಲ್ವಿ, ಇತರರು ಇದ್ದರು.

ಕಾಲೇಜಿನ ಪ್ರಾಚಾರ್ಯ ಡಾ. ಜಿ. ಕೃಷ್ಣಮೂರ್ತಿ ಸ್ವಾಗತಿಸಿದರು. ತನುಜಾ ರೋಖಡೆ ನಿರೂಪಿಸಿದರು. ಪ್ರಶಾಂತ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net