

ಚಿತ್ರದುರ್ಗ: ವರ್ಣ ವ್ಯವಸ್ಥೆಯ ಶೋಷಣೆ ಖಂಡಿಸಿ, ಮಾನವ ಧರ್ಮ ಪ್ರತಿಪಾದಿಸಿದ ಸ್ವಾಮಿ ವಿವೇಕಾನಂದರು ಚಿಕಾಗೋ ಸಮ್ಮೇಳನದಲ್ಲಿ ಬುದ್ಧನ ನಾಡಿನಿಂದ ಬಂದಿರುವುದಾಗಿ ಹೆಮ್ಮೆಯಿಂದ ಹೇಳಿ, ಮನಸಾರೆ ಮೆಚ್ಚಿದ್ದನ್ನು ಎಂದಿಗೂ ಮರೆಯುವಂತಿಲ್ಲ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.
ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಕೈ-ರೇಖೆ, ಹಣೆ-ಬರಹ ನಂಬಿದರೆ ಪ್ರಯೋಜನವಿಲ್ಲ. ಜ್ಞ್ಞಾನ ಮತ್ತು ಆತ್ಮವಿಶ್ವಾಸದಿಂದ ಮುನ್ನುಗಿದರೆ, ಸಾಧನೆ ಸಾಧ್ಯವೆಂಬ ವಿವೇಕ ವಾಣಿ ಸದಾ ಕಾಲಕ್ಕೂ ಪ್ರಸ್ತುತ ಎಂದರು.
ಲೇಖಕ ಮೊದೂರು ತೇಜ ಮಾತನಾಡಿ, ಸ್ವಾಮಿ ವಿವೇಕಾನಂದರು ಹಸಿದವನಿಗೆ ಅನ್ನ ನೀಡಿದಾಗ ಅವನ ಮುಖದಲ್ಲಿ ಮೂಡುವ ಕಿರು ನಗೆಯಲ್ಲೇ ದೇವರನ್ನು ಕಾಣಿ ಎಂದ ಮಹನೀಯ. ಅವರ ವೈಚಾರಿಕ ಚಿಂತನೆ ಯುವಸಮೂಹದ ಬೆಳವಣಿಗೆಗೆ ಸದಾ ಸ್ಪೂರ್ತಿ ಎಂದು ತಿಳಿಸಿದರು.
ರಂಗ ನಿರ್ದೇಶಕ ಧೀಮಂತರಾವ್, ಪರಿಷತ್‌ನ ಹಿರಿಯೂರು ತಾಲೂಕು ಅಧ್ಯಕ್ಷ ನಾಗೇಂದ್ರಪ್ಪ, ಶಿಕ್ಷಕರಾದ ಲಕ್ಷ್ಮೀದೇವಿ, ರಾಮಣ್ಣ, ವಕೀಲ ಚಂದ್ರಪ್ಪ, ದುರ್ಗೇಶ್, ಶಾಂತಮ್ಮ, ತಿಪ್ಪಮ್ಮ, ದಾಕ್ಷಾಯಣಿ, ಬೆಸ್ಕಾಂ ತಿಪ್ಪೇಸ್ವಾಮಿ, ಬನ್ನಿಕೋಡ್ ರಮೇಶ್ ಇತರರಿದ್ದರು.