

ಗಂಡಸಿ: ಹೋಬಳಿಯ ಲಾಳನಕೆರೆ, ವಡಗರನಹಳ್ಳಿ, ಗಾಂಧಿನಗರ ಎಲ್, ಹೊನ್ನೇನಹಳ್ಳಿ ಗ್ರಾಮಗಳ ರೈತರಿಗೆ ಕಣ್ಣಿಗೆ ಆಗಾಗ್ಗೆ ಕಾಣಿಸಿಕೊಳ್ಳುವ ಮೂಲಕ ಭಯದ ವಾತಾವರಣ ಸೃಷ್ಟಿಸಿದ್ದ ಚಿರತೆಯು ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿದೆ.
ಅರಣ್ಯ ಇಲಾಖೆಯವರ ಲಾಳನಕೆರೆ ತೋಟದ ಬಳಿ ಇರಿಸಿದ್ದ ಬೋನಿಗೆ ಈ ಚಿರತೆ ಸೆರೆಯಾಗಿದ್ದು, ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟಿಸಿರುವ ಬಿಡುವಂತಾಗಿದೆ. ಇದೇ ಚಿರತೆಯು ಎರಡು ದಿನದ ಹಿಂದೆ ಅಣ್ಣಯ್ಯರು ತಮ್ಮ ತೋಟದಲ್ಲಿ ಮೇಯಲು ಕಟ್ಟಿದ್ದ ಸುಮಾರು 40 ಸಾವಿರ ಬೆಲೆಬಾಳುವ ಹಸುವನ್ನು ಚಿರತೆ ಕೊಂದು ತಿಂದಿತ್ತು. ಗ್ರಾಮಗಳ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಇದನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸ್ಪಂದಿಸಿದ ಅರಣ್ಯ ಇಲಾಖೆಯು ಚಿರತೆಯ ಚಲನವನಗಳನ್ನು ಗಮನಿಸಿ ಅಣ್ಣಯ್ಯ ರವರ ತೋಟದ ಬಳಿ ಬೋನು ಇರಿಸಿದ್ದರು.
ಶುಕ್ರವಾರ ರಾತ್ರಿ ಚಿರತೆಯು ಬೋನಿಗೆ ಬಿದ್ದಿದೆ. ಇದರಿಂದ ಗ್ರಾಮಸ್ಥರಲ್ಲಿ ಇದ್ದ ಆತಂಕ ನಿವಾರಣೆಯಾಗಿದೆ.