ಬೋಧನೆ,ನಟನೆ ನಾಣ್ಯದೆರಡು ಮುಖಗಳು

CTD 21 NATAKA---08
Published on

ಚಿತ್ರದುರ್ಗ: ಪ್ರತಿ ಪ್ರಶಿಕ್ಷಣಾರ್ಥಿಗೂ ರಂಗಕಲೆಯ ಅರಿವಿರಬೇಕೆಂದು ಪ್ರಾಚಾರ‌್ಯ ಡಾ.ಎ.ಜಿ.ಬಸವರಾಜಪ್ಪ ಹೇಳಿದರು. ನಗರದ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿಕ್ಷ ಣದಲ್ಲಿ ರಂಗಕಲೆ ವಿಷಯವಾಗಿ ಪ್ರಾಯೋಗಿಕ ರಂಗಭೂಮಿ ತರಬೇತಿ ಕಾರ‌್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,ಬೋಧನೆ ಮತ್ತು ನಟ ನೆ ನಾಣ್ಯದ ಎರಡು ಮುಖಗಳಿದ್ದಂತೆ.

ಕಲಿಕೆ ಎಂಬುದು ನಿರಂತರ. ಪ್ರಶಿಕ್ಷಣಾರ್ಥಿಗಳು ಶಾಲಾಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸ ಬೇಕು,ರಾಷ್ಟ್ರವನ್ನು ಬಲಿಷ್ಠಗೊಳಿಸುವ ಶಕ್ತಿಯನ್ನು ಅವರಲ್ಲಿ ತುಂಬಬೇಕು

ಮಕ್ಕಳಿಗೆ ಉಪಯುಕ್ತವಾಗುವ ಪಠ್ಯಾಧಾರಿತ ವಿಷಯಗಳನ್ನು ರಂಗ ಚಟುವಟಿಕೆಗಳ ಮೂಲಕ ಬೋಧನೆಗೆ ತೊಡಗಿದರೆ ಆಸಕ್ತಿದಾಯಕ ಕಲಿಕೆ ಬೌದ್ಧಿಕ ಮಟ್ಟವನ್ನು ಪ್ರಬುದ್ಧಮಾನವಾಗಿ ಬೆಳೆಸಲು ಅನುಕೂಲವಾಗುತ್ತದೆ. ಮಕ್ಕಳಲ್ಲಿ ಸದಾ ಆಸಕ್ತಿದಾಯಕ ಚಟುವಟಿಕೆಗಳಿಗೆ ರಂಗಭೂಮಿ ಕ್ಷೇತ್ರ ಪೂರಕವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ‌್ಯ ಡಾ.ಕೆ.ಮೋಹನ್‌ಕುಮಾರ್ ಮಾತನಾಡಿ ರಂಗಭೂಮಿಯು ಅಂತರಂಗ ಮತ್ತು ಬಹಿರಂಗ ಎರಡನ್ನೂ ಸ ದಾ ಉತ್ಸಾಹದಲ್ಲಿಡುವ ಸೃಜನಾತ್ಮಕ ಮತ್ತು ಕ್ರಿಯಾಶೀಲ ಕಲೆಯಾಗಿದೆ. ನಾಯಕತ್ವದ ಗುಣವನ್ನು ಬೆಳೆಸುತ್ತದೆ ಎಂದರು. ಉಪನ್ಯಾಸಕರಾದ ಮಹಾಂತೇಶ.ಇ, ಬಿ.ಪಾತಲಿಂಗಪ್ಪ,ಬಿ.ಎಸ್.ನಟರಾಜ,ಎಂ.ಸ್ವಾತಿ ಪಾಳೇಗಾರ,ಬಿ.ಹೇಮಲತಾ ಮಾತನಾಡಿದರು.

ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ವಿವಿಧ ರೂಪಕಗಳ ಪ್ರದ ರ್ಶನ ನೀಡಿದರು. ಸುಷ್ಮಾ ಮತ್ತು ಅನುಷಾ ಪ್ರಾರ್ಥಿಸಿದರು. ಮಹಾಂತೇಶ್ ವಂದಿಸಿದರು. ಆರ್.ಕೃಷ್ಣ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net