ಬೋಧನೆ-ಕಲಿಕೆಯ ನೈಜ ಸಮಸ್ಯೆಗಳನ್ನು ಗುರುತಿಸಿ

DIET FACULTY photo-1.1 (1)--5
Published on

ಚಿತ್ರದುರ್ಗ:ಗುಣಮಟ್ಟದ ಶಿಕ್ಷಣಕ್ಕೆ ಶೈಕ್ಷಣಿಕ ಸಂಶೋಧನಾ ಅಧ್ಯಯನದ ಅಗತ್ಯವಿದೆ ಎಂದು ಡಯಟ್ ಸಂಸ್ಥೆಯವರು ಹೊಸ ಚಿಂತ ನೆ,ಆಲೋಚನೆಯೊಂದಿಗೆ ಸಂಶೋಧನೆಗೆ ಹೆಚ್ಚು ಆದ್ಯತೆ ನೀಡ ಬೇಕೆಂದು ಡಿಎಸ್‌ಇಆರ್‌ಟಿ(ರಾಜ್ಯಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ)ನಿರ್ದೇಶಕಿ ವಿ.ಸುಮಂಗಲಾ ಹೇಳಿದರು.
ಡಿಎಸ್‌ಇಆರ್‌ಟಿ ಮತ್ತು ದಾವಣಗೆರೆ ಡಯಟ್ ಆಶ್ರಯದಲ್ಲಿ ಬುಧವಾರ ರಾಜ್ಯದ 34ಡಯಟ್‌ಗಳ ಪ್ರಗತಿ ಪರಿಶೀಲನೆ ವಿಡಿಯೊ ಕಾ ನ್ಫ್‌ರೆನ್ಸ್‌ನಲ್ಲಿ ಮಾತನಾಡಿದ ಅವರು,ಡಯಟ್ ಉಪನ್ಯಾಸಕರು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿದಾಗ ಬೋಧನೆ-ಕಲಿಕೆ ನೈಜ ಸ ಮಸ್ಯೆಗಳನ್ನು ಗುರುತಿಸಿ ಸಂಶೋಧನಾ ಅಧ್ಯಯನ ನಡೆಸಬೇಕೆಂದರು.
ಚಿತ್ರದುರ್ಗ ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್,ಹಿರಿಯ ಉಪನ್ಯಾಸಕರಾದ ಇ.ಹಾಲಮೂರ್ತಿ,ಎಸ್.ಸಿ.ಪ್ರಸಾದ್,ಎಸ್. ಜ್ಞಾನೇ ಶ್ವರ,ಉಪನ್ಯಾಸಕರಾದ ಆರ್.ನಾಗರಾಜು,ಎಸ್.ಬಸವರಾಜು,ಯು.ಸಿದ್ದೇಶಿ,ಕೆ.ಜಿ.ಪ್ರಶಾಂತ್,ಬಿ.ಎಸ್.ನಿತ್ಯಾನಂದ,ವಿ.ಕನಕಮ್ಮ, ಸಿ.ಎಸ್. ಲೀಲಾವತಿ,ಎನ್.ರಾಘವೇಂದ್ರ, ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net