

ಚಿತ್ರದುರ್ಗ: ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದಾಗಿದೆ ಎಂದು ಕಲಬುರುಗಿ ಕರ್ನಾಟಕ ಕೇಂದ್ರೀಯ ವಿವಿ ಶಿಕ್ಷಣ ವಿಭಾಗದ ಡೀನ್ ಪ್ರೊ.ಜಿ.ಆರ್.ಅಂಗಡಿ ಹೇಳಿದರು. ನಗರದ ಎಸ್‌ಆರ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಹಾಗೂ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬ ದಲಾಗುತ್ತಿರುವ ಶೈಕ್ಷಣಿಕ ವ್ಯವಸ್ಥೆಗೆ ಹೊಂದಿಕೊಳ್ಳಲು ಬೋಧನಾ ಕೌಶಲ,ತಂತ್ರಗಳು ಹಾಗೂ ಅರ್ಹತೆ ಪಡೆಯಲು ಶಿಕ್ಷಕರು ನಿರಂತರ ವಾಗಿ ಪ್ರಯತ್ನಿಸುತ್ತಿರಬೇಕೆಂದರು.
ಸಂಸ್ಥೆ ಕಾರ‌್ಯದರ್ಶಿ ಸುಜಾತ ಲಿಂಗಾರೆಡ್ಡಿ,ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಟಿ.ಎಸ್.ರವಿ ಮಾತನಾಡಿದರು. ಸಹಾಯಕ ಪ್ರಾಧ್ಯಾ ಪಕ ಡಾ.ಬಿ.ಹನುಮಂತಪ್ಪ ತರಬೇತಿ ಚಟುವಟಿಕೆಗಳ ವಿಜೇತ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಿದರು. ಹಿರಿಯ ಉಪನ್ಯಾಸಕ ರಾದ ಪಿ.ಬಿ.ಆಶಾ, ಆರ್.ಮಮತಾ, ಟಿ.ಕಲ್ಲಪ್ಪ,ಬಿ.ರವಿಕುಮಾರ್,ಎಲ್.ಪಿ.ದಯಾನಂದ ಇದ್ದರು. ಪ್ರಶಿಕ್ಷಣಾರ್ಥಿಗಳಾದ ಎಚ್.ಆಶಾ ಸ್ವಾಗತಿಸಿ, ಎನ್.ಪಲ್ಲವಿ ವಂದಿಸಿದರು. ಎನ್.ಪೃಥ್ವಿ ಮತ್ತು ಕೆ.ರಮೇಶ್ ನಿರೂಪಿಸಿದರು.