ಬೋಧನಾ ಕೌಶಲ ಪಡೆಯಿರಿ

05 KAMPLI 03
Published on

ಕಂಪ್ಲಿ: ಎಮ್ಮಿಗನೂರು ಗ್ರಾಮದ ಎಸ್‌ಡಬ್ಲುೃಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಶುಕ್ರವಾರ ನಡೆಯಿತು.

ಮುಖ್ಯಶಿಕ್ಷಕ ಮಂಜಪ್ಪ ಹೂಗಾರ ಮಾತನಾಡಿ, ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸಿ ಅಕ್ಷರಸ್ಥರನ್ನಾಗಿಸುವಲ್ಲಿ ಶಿಕ್ಷಕರು ಸಕರಾತ್ಮಕವಾಗಿ ಚಿಂತಿಸಬೇಕಿದೆ. ಮಕ್ಕಳ ಮನಸೆಳೆದು ಪಾಠ ಬೋಧಿಸುವ ಕೌಶಲ್ಯವನ್ನು ಶಿಕ್ಷಕರು ಗಳಿಸಬೇಕಿದೆ. ಮಕ್ಕಳ ಕಲಿಕಾ ಸಂಭ್ರಮವೇ ಶಿಕ್ಷಕರ ದಿನಾಚರಣೆಯಾಗಿದೆ ಎಂದರು. ಮಕ್ಕಳು ಶಿಕ್ಷಕರಿಗೆ ಶುಭಾಶಯ ಕೋರಿ, ಕಾಣಿಕೆ ನೀಡಿ ಸಂಭ್ರಮಿಸಿದರು. ಶಿಕ್ಷಕರಾದ ಜ್ಯೋತಿ, ಸಂಗಮ್ಮ, ಲಕ್ಷ್ಮೀ, ವೀರೇಶ, ಮಲ್ಲೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net