ಬೋಧಕರಿಗೆ ಆದರ್ಶ ಗುಣಗಳು ಇರಬೇಕು

1111111111
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿವಿಧ ಶಿಬಿರಗಳ ಆಯೋಜನೆಯಿಂದ ವಿದ್ಯಾರ್ಥಿ ಮತ್ತು ಬೋಧಕದಲ್ಲಿ ಹೊಸ ಹುಮ್ಮಸ್ಸು ಮೂಡಿ ಶಿಕ್ಷಣ ಪ್ರಕ್ರಿಯೆ ಯಶಸ್ವಿಗೊಳ್ಳಲು ಸಹಕಾರಿ. ಆದ್ದರಿಂದ ಜಡಗೊಂಡ ಬೋಧನೆ ಮತ್ತು ಬೋಧಕರನ್ನು ಸುಧಾರಿಸಲು ಶಿಬಿರಗಳು ಅವಶ್ಯಕ. ಬೋಧಕರಿಗೆ ಪಾಂಡಿತ್ಯದ ಜೊತೆಗೆ ಆದರ್ಶ ಗುಣಗಳು ಇರಬೇಕು ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ಜಿಲ್ಲಾ ಕನ್ನಡ ಉಪನ್ಯಾಸಕರ ವೇದಿಕೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿಯಾಗಿ ನಗರದ ಜೆಎಸ್‌ಎಸ್‌ನ ಆರ್.ಎಸ್. ಹುಕ್ಕೇರಿಕರ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ವಿಷಯ ಉಪನ್ಯಾಸಕರ ಪುನಃಶ್ಚೇತನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯಾರೂ ಕಳೆದುಕೊಳ್ಳಲಾಗದ ಸಂಪತ್ತು ಎಂದರೆ ವಿದ್ಯೆ. e್ಞÁನವನ್ನು ವಿಸ್ತರಿಸುವ ಕಾರ್ಯದಲ್ಲಿ ನಿರತ ನಾವು ತ್ಯಾಗ, ತಾಳ್ಮೆ, ಸಹನೆಯಂಥ ಆದರ್ಶ ಗುಣಗಳ ಜೊತೆಗೆ ಪಾಂಡಿತ್ಯ ಹೊಂದಬೇಕು ಎಂದರು.
ಆರ್.ಎಸ್. ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಭಾರತಿ ಶಾನಭಾಗ ಅಧ್ಯಕ್ಷತೆ ವಹಿಸಿದ್ದರು. ಕಾವ್ಯ ಕುರಿತು ಎಸ್.ಎಸ್. ಭದ್ರಾಪುರ, ನಾಟಕ ಕುರಿತು ಡಾ. ಶ್ರೀಧರ ಹೆಗಡೆ ಭದ್ರನ್, ಗದ್ಯ ಕುರಿತು ಡಾ. ಸರ್ವಮಂಗಳಾ ಕುದರಿ ವಿಷಯ ಮಂಡಿಸಿದರು.
ಡಾ. ಶರಣಮ್ಮ ಗೊರೆಬಾಳ, ಡಾ. ಸದಾಶಿವ ನಡುವಿನಕೆರೆ, ಆರ್.ಎಸ್. ಹೊಂಕಣದವರ, ವೀರೇಂದ್ರಕುಮಾರ ಎಂ.ಎಸ್. ಹಾಗೂ ಕನ್ನಡ ಉಪನ್ಯಾಸಕರಿದ್ದರು.
ಡಾ. ಗೋವಿಂದರಾಜ ತಳಕೋಡ ನಿರೂಪಿಸಿದರು. ಡಾ. ಶಿವಾನಂದ ಟವಳಿ ಸ್ವಾಗತಿಸಿದರು. ಡಾ. ಸಂಗಯ್ಯ ಶಿವಪ್ಪಯ್ಯನಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net