

ಚಿತ್ರದುರ್ಗ: ಸಂಘಟನೆ ಜತೆಗೆ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವುದು ಕೂಡ ಮುಖ್ಯವೆಂದು ಜಿಲ್ಲಾ ಕಟ್ಟಡ ಕಾರ್ಮಿಕರ ಜಿಲ್ಲಾ ಸಮಿತಿ ಪ್ರಧಾನ ಕಾರ‌್ಯದರ್ಶಿ ಸಿ.ಕೆ.ಗೌಸ್‌ಪೀರ್ ಹೇಳಿದರು.
ರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೇಡರೇಷನ್,ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮಿತಿ ಆಶ್ರ ಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ 139ನೇ ವಿಶ್ವ ಕಾರ್ಮಿಕರ ದಿನಾಚರಣೆ ಮತ್ತು ಹಿರಿಯ ಕಾರ್ಮಿಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕ ಸಂಘಟಗೆಳ ಸಂಖ್ಯೆ ಹೆಚ್ಚಾಗಿದ್ದರೂ, ಈ ಸಂಘಟನೆಗಳ ಪೈಕಿ ಕೆಲವು ಸಂಘಟನೆಗಳು ಕಾರ್ಮಿಕರ ಹಿತ ಕಾಪಾಡಲು ವಿಫಲ ವಾಗಿವೆ. ಸರ್ಕಾರ ಮೇ1ರಂದು ರಜೆ ಘೋಷಿಸಿದ್ದರೂ ಕಟ್ಟಡ,ಹೋಟೆಲ್,ಅಂಗಡಿ,ಬಾರ್‌ಗಳಲ್ಲಿ ಮತ್ತಿರೆಡೆ ಕೆಲಸ ಮಾಡುವವರಿಗೆ ರಜೆ ಇರುವುದಿಲ್ಲ. ಈ ಕುರಿತು ಕಾರ್ಮಿಕ ಇಲಾಖೆ ಮಾಲೀಕರಿಗೆ ನೋಟಿಸ್ ಕೂಡ ಕೊಟ್ಟಿಲ್ಲವೆಂದು ಬೇಸರಿಸಿದರು.
ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಬೋಗಸ್‌ಕಾರ್ಡಗಳ ಸಂಖ್ಯೆ ಹೆಚ್ಚಳದಿಂದ ನೈಜ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತ ರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಂಡಳಿಗೆ ಪತ್ರ ಬರೆಯಲಾಗಿದೆ ಎಂದರು. ನಿವೃತ್ತ ಪ್ರಾಂಶುಪಾಲ ಪ್ರೊ. ಜೆ.ಯಾದವರೆಡ್ಡಿ ಮಾತನಾಡಿ,ಮೇ 1ರಂದು ಕಾರ್ಮಿಕರನ್ನು ಗೌರವಿಸುವ ದಿನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇಂದ್ರ ದಲ್ಲಿ ಕಾನೂನು ಸಚಿವರಾಗಿದ್ದಾಗ ಕಾರ್ಮಿಕರ ರಕ್ಷಣೆಗೆ ಹಲವು ಕಾನೂನುಗಳನ್ನು ಜಾರಿಗೊಳಿಸಿದ್ದರೆಂದರು.
ಕಟ್ಟಡ ಕಾರ್ಮಿಕರ ಜಿಲ್ಲಾ ಸಮಿತಿ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.ಗೌರವಾಧ್ಯಕ್ಷ ಅಬ್ದುಲ್ಲಾ,ಸಣ್ಣಮ್ಮ, ದ್ರಾಕ್ಷಾಯಣಮ್ಮ, ಇಸ್ಮಾಯಿಲ್‌ಸಾಬ್,ಟಿ.ಷಫಿವುಲ್ಲಾ ಇತರರು ಇದ್ದರು. ಕಾರ‌್ಯಕ್ರಮಕ್ಕೂ ಮೊದಲು ನಗರದ ಭಗತ್‌ಸಿಂಗ್ ಉದ್ಯಾನದಿಂದ ಪತ್ರಿಕಾ ಭವ ನದವರೆಗೆ ಕಾರ್ಮಿಕರ ಮೆರವಣಿಗೆ ನಡೆಯಿತು.