ಬೊಮ್ಮಲಿಂಗೇಶ್ವರ ದೇವಸ್ಥಾನ ಕಳಸ ಪ್ರತಿಷ್ಠಾಪನೆ

Oplus_131072
Oplus_131072
Published on

ನಂಜನಗೂಡು: ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ಕಲ್ಕುಂದ ಗ್ರಾಮದಲ್ಲಿ ಭಾನುವಾರ ಶ್ರೀ ಬೊಮ್ಮಲಿಂಗೇಶ್ವರ ದೇವಸ್ಥಾನದ ಕಳಸ ಪ್ರತಿಷ್ಠಾಪನೆ ಮಾಡಲಾಯಿತು.

ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಹೋಮ-ಹವನ, ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಟೆ, ನಗಾರಿ, ಪೂಜಾಕುಣಿತ, ವೀರಭದ್ರನ ಕುಣಿತ, ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಿದರು. ನಂತರ ಗೋಪುರದ ಕಳಸವನ್ನು ಪ್ರತಿಷ್ಠಾಪನೆ ಮಾಡಿದರು. ಇಂಪು ಇಂಚರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಕಿರುಗುಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜನಪದ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜನಪದ ಸಂಭ್ರಮ ಕಾರ್ಯಕ್ರಮವನ್ನು ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ಉದ್ಘಾಟಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜನಪದ ಗಾಯನ, ಸುಗಮ ಸಂಗೀತ, ಹರಿಕಥೆ, ಸೋಬಾನೆ ಪದ, ಭಾವಗೀತೆ, ಭಕ್ತಿ ಗೀತೆಗಳನ್ನು ಕಲಾವಿದರು ಹಾಡಿದರು. ಮುಖಂಡರಾದ ರಾಜಣ್ಣ, ಬಸವರಾಜು, ಚಿನ್ನಸ್ವಾಮಿ, ರಾಜು, ಚುಂಚನಹಳ್ಳಿ ಗ್ರಾಪಂ ಸದಸ್ಯ ಡಿ.ಎಂ.ಮಹದೇವು, ಇಂಪು ಇಂಚರ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸಮೂರ್ತಿ ಕಿರುಗುಂದ, ಕಲಾವಿದರಾದ ಎಂ.ಡಿ.ರಾಜೇಂದ್ರ ಪ್ರಸಾದ್, ಪದ್ಮಾ, ಗೋಪಾಲ, ಪುಟ್ಟರಾಜು, ಮಲಿಯೂರು ಮಂಜು, ಅಳಗಂಚಿ ಮಹೇಶ, ಪುರಷೋತ್ತಮ, ಕೂಗಲೂರು ಶಿವರಾಜು, ನಾಗೇಶ, ಮಂಜುಪ್ರಸಾದ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net