ಬೊಮ್ಮಗೊಂಡೇಶ್ವರ ಉತ್ಸವ: ಸಮಿತಿಗೆ ಆಯ್ಕೆ

Bommgondeshwar Utsav Bhalki Meeting Photo-2
Published on

ಬೀದರ್: ಬೀದರ್‍ನಲ್ಲಿ ಮಾ. 12 ರಂದು ನಡೆಯಲಿರುವ ಬೊಮ್ಮಗೊಂಡೇಶ್ವರ ಉತ್ಸವ ಪ್ರಯುಕ್ತ ಭಾಲ್ಕಿ ತಾಲ್ಲೂಕು ಸಮಿತಿ ರಚಿಸಿದ್ದು, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಭಾಲ್ಕಿ ಪಟ್ಟಣದ ಕನಕ ಭವನದಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಸಮಿತಿಯ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ತಾಲ್ಲೂಕು ಸಮಿತಿ ಪದಾಧಿಕಾರಿಗಳಲ್ಲಿ ಕೆ.ಡಿ. ಗಣೇಶ (ಗೌರವಾಧ್ಯಕ್ಷ), ಬಾಲಾಜಿ ಖೇಡಕರ್(ಅಧ್ಯಕ್ಷ), ಸಂಜೀವಕುಮಾರ ಗುಂಜರಗೆ (ಉಪಾಧ್ಯಕ್ಷ), ಸಂತೋಷ ಜಬಾಡೆ, ಪಂಢರಿ ಮೇತ್ರೆ (ಕಾರ್ಯದರ್ಶಿ), ಬಾಲಾಜಿ ಜಬಾಡೆ, ಅಶೋಕ ಗೋಧಿಹಿಪ್ಪರ್ಗಾ, ಗೋವಿಂದ ಕಮಠಾಣೆ, ವಿಜಯಕುಮಾರ ಬ್ಯಾಲಹಳ್ಳಿ, ಶಾಲಿವಾನ ಘೋದೆ, ಮಾರುತಿ ಕುರುಬಖೇಳಗಿ, ಸಿದ್ಧಗೊಂಡ ಸಿದ್ಧೇಶ್ವರ ಮತ್ತು ಶಿವಕುಮಾರ ಮರೂರ (ಸಂಘಟನಾ ಕಾರ್ಯದರ್ಶಿಗಳು).
ತಾಲ್ಲೂಕು ಸಮಿತಿ ಪದಾಧಿಕಾರಿಗಳು ತಾಲ್ಲೂಕಿನಲ್ಲಿ ಬೊಮ್ಮಗೊಂಡೇಶ್ವರ ಉತ್ಸವದ ಪ್ರಚಾರ ನಡೆಸಬೇಕು. ಉತ್ಸವದ ಯಶಸ್ವಿಗೆ ಶ್ರಮಿಸಬೇಕು ಎಂದು ಸಂತೋಷಕುಮಾರ ಜೋಳದಾಪಕೆ ಹೇಳಿದರು.
ಗೊಂಡ (ಕುರುಬ) ಸಮಾಜದ ಮುಖಂಡರಾದ ಭಾಲ್ಕೇಶ್ವರ ಹುಡಗೆ, ಶಿವಶರಣಪ್ಪ ಛೇತ್ರೆ, ನಿರಂಜಪ್ಪ ಪಾತ್ರೆ, ದಿಗಂಬರ ಮಾಸಿಮಾಡೆ, ಎಂ.ಪಿ. ವೈಜಿನಾಥ, ಮಾರುತಿ ಮೇತ್ರೆ, ಸುರೇಶ ಸಂಭಾಜಿ ಕುರುಬಖೇಳಗಿ, ಅನಿಲ್ ಬಾಳೂರೆ, ಮಾರುತಿ ಹೊಟೇಲ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net