

ಚಿತ್ರದುರ್ಗ: ಕೆಲಸದ ಒತ್ತಡದಲ್ಲಿರುವ ಪೊಲೀಸರ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಅಧಿಕ ಬೊಜ್ಜು ಕರಗಿಸಲು ಜಿಲ್ಲಾ ಪೊಲೀಸ್ ಇಲಾಖೆ, ಇಸ್ರೇಲ್ ಮೂಲದ ಹೈಗೇರ್ ಫೀಟ್ ಕಂಪನಿ ನೆರವಿನೊಂದಿಗೆ ಮೂರು ತಿಂಗಳ ಅವಧಿಯ ಪೊಲೀಸ್ ವೆಲ್‌ನೆಸ್ ಪ್ರೋಗಾಂನಲ್ಲಿ ಇಲಾಖೆಯ 119 ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದರು.
ಬಾಡಿ ಮಾಸ್ ಇಂಡೆಡಕ್ಸ್ (ಬಿಎಂಐ) 29 ಮೀರಿದ 119 ಅಧಿಕಾರಿ, ಸಿಬ್ಬಂದಿಗೆ ಅಗತ್ಯ ಪರಿಕರಗಳನ್ನು ಒದಗಿಸಲಾಗಿತ್ತು. ಅವರ ವರ್ಕ್‌ಔಟ್‌ನ್ನು ಹಿರಿಯ ಅಧಿಕಾರಿಗಳು ಟ್ರಾೃಕ್ ಮಾಡುತ್ತಿದ್ದರು.
ಈ ಪೈಕಿ ಹಲವರು ಅಧಿಕ ಬೊಜ್ಜನ್ನು ಕರಗಿಸಿಕೊಂಡಿದ್ದು, ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಇದರಲ್ಲಿ ಉತ್ತಮ ಸಾಧನೆ ತೋರಿದ 7 ಅಧಿಕಾರಿ, ಸಿಬ್ಬಂದಿ ಬಹುಮಾನಕ್ಕೆ ಹಾಗೂ ಉಳಿದವರು ಇಲಾಖೆ ಪ್ರಶಂಸ ಪತ್ರಕ್ಕೆ ಭಾಜನರಾಗಿದ್ದಾರೆ.
ನಗರದ ಡಿಎಆರ್ ಕಚೇರಿಯಲ್ಲಿ ಈಚೆಗೆ ಏರ್ಪಡಿಸಿದ್ದ ಕಾರ‌್ಯಕ್ರಮದಲ್ಲಿ ಅಧಿಕಾರಿ, ಸಿಬ್ಬಂದಿಗೆ ಬಹುಮಾನ, ಪ್ರಶಂಸ ಪತ್ರ ವಿತರಿಸಿದ ಜಿಲ್ಲಾ ರಕ್ಷಣಾಧಿಕಾರಿ ಧಮೇರ್ಂದರ್‌ಕುಮಾರ್ ಮೀನಾ ಮಾತನಾಡಿ, ಮಾನಸಿಕ, ದೈಹಿಕ ಆರೋಗ್ಯ ಸುಧಾರಣೆಗೆ ವ್ಯಾಯಾಮ, ಉತ್ತಮ ಪೋಷಕಾಂಶಯುಕ್ತ ಆಹಾರ ಸೇವಿಸುವುದರೊಂದಿಗೆ ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಕಂಪನಿ ಅಧಿಕಾರಿಗಳಾದ ಶರತ್‌ಕುಮಾರ್, ಬಸವರಾಜು, ಡಿವೈಎಸ್‌ಪಿಗಳಾದ ಎಸ್.ಚೈತ್ರಾ, ಪಿ.ಕೆ.ದಿನಕರ್, ಎಸ್.ಎಸ್.ಗಣೇಶ್, ಪಿಐಗಳಾದ ನಯೀಂ ಅಹಮದ್, ದೊಡ್ಡಣ್ಣ, ಇಲಾಖೆಯ ಕೆ.ಎಚ್.ಶಾರದಾ ಮತ್ತಿತರರು ಇದ್ದರು.