ಬೈಲಹೊಂಗಲ ರೋಟರಿ ಕಾರ್ಯ ಶ್ಲಾಘನೀಯ

20..4
ಬೈಲಹೊಂಗಲ ರೋಟರಿ ನೂತನ ಕ್ಲಬ್ ಪದಾಕಾರಿಗಳ ಅಕಾರ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್ ನಾಸೀರ್ ಬ್ರೋಸದವಾಲಾ ಉದ್ಘಾಟಿಸಿದರು. ನಾರಾಯಣ ಪಾಸಲಕರ, ಮಹಾಂತೇಶ ಪುರಾಣಿಕಮಠ, ಮಹೇಶ ಬೆಲ್ಲದ ಇತರರು ಇದ್ದರು.
Published on

ಬೈಲಹೊಂಗಲ: ಪಟ್ಟಣದ ರೋಟರಿ ಕ್ಲಬ್ ಸಮಾಜಮುಖಿ ಕಾರ್ಯಗಳನ್ನು ಕೆಗೊಂಡು ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ನಾಸೀರ್ ಬ್ರೋಸದವಾಲಾ ಹೇಳಿದರು


ಪಟ್ಟಣದ ಹೊಸೂರು ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಥಳೀಯ ರೋಟರಿ ಕ್ಲಬ್‌ನ ನೂತನ ಪದಾಕಾರಿಗಳ ಅಕಾರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.


ರೋಟರಿ ಸಂಸ್ಥೆ ದೇಶದಲ್ಲಿ ಹೆಚ್ಚು ಶಾಖೆಗಳನ್ನು ಹೊಂದಿ ನಿಸ್ವಾರ್ಥದಿಂದ ಜನರ ಹಾಗೂ ಸಮಾಜದ ಸೇವೆ ಮಾಡುತ್ತಿದೆ. ಈ ಸಂಸ್ಥೆಯ ಸ್ಥಳೀಯ ನೂತನ ಪದಾಕಾರಿಗಳು ತಮ್ಮ ಅವಯಲ್ಲಿ ಉತ್ತಮ ಕಾರ್ಯ ಮಾಡಬೇಕೆಂದರು.


ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ನಾರಾಯಣ ಪಾಸಲಕರ, ಕಾರ್ಯದರ್ಶಿಯಾಗಿ ಡಾ.ಮಹಾಂತೇಶ ಪುರಾಣಿಕಮಠ ಅಕಾರ ವಹಿಸಿಕೊಂಡರು. ಡಾ.ಚಿದಂಬರ ಕುಲಕರ್ಣಿ, ಮಾಜಿ ಅಧ್ಯಕ್ಷ ಡಾ.ನಾಗರಾಜ ಹಲಸಗಿ, ಕಾರ್ಯದರ್ಶಿ ಮಹಾಂತೇಶ ಜಿಗಜಿನ್ನಿ, ಮಹೇಶ ಬೆಲ್ಲದ ಇದ್ದರು. ಹಿರಿಯ ರೋಟರಿಯನ್‌ಗಳಾದ ಡಾ. ಬಸವರಾಜ ಮಹಾಂತಶೆಟ್ಟಿ, ಡಾ. ಮಹಾಂತೇಶ ಗದಗ, ರಾಜಶೇಖರ ಮೆಟಗುಡ್ಡ, ಸಂಗಯ್ಯ ಹಿರೇಮಠ, ಡಾ. ಚಂದ್ರಶೇಖರ ಗಣಾಚಾರಿ, ಡಾ. ಮಹಾಂತೇಶ ಕಳ್ಳಿಬಡ್ಡಿ, ಮಲ್ಲಿಕಾರ್ಜುನ ಬೋಳನ್ನವರ, ಡಾ. ಸಿ.ಬಿ. ಗಣಾಚಾರಿ, ಆನಂದ ವಾಲಿ, ಸಂಜಯ ಮಹಾಲೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net