ಬೈಲಹೊಂಗಲ ಬಂದ್​ ವಾಪಸ್​

1
Published on

ಬೈಲಹೊಂಗಲ: ಪಟ್ಟಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ 200ನೇ ವಿಜಯೋತ್ಸವ ಆಚರಿಸುವ ಭರವಸೆಯನ್ನು ಶಾಸಕರು, ಅ-ಧಿಕಾರಿಗಳು ನೀಡಿದ್ದರಿಂದ ಅ.21ರಂದು ನೀಡಿದ್ದ ಬೆಲಹೊಂಗಲ ಬಂದ್​ ವಾಪಸ್​ ಪಡೆಯಲಾಗಿದೆ.

ವೀರರಾಣಿ ಕಿತ್ತೂರು ಚನ್ನಮ್ಮನ ಸ್ಮರಣೋತ್ಸವ ಸಮಿತಿ ವತಿಯಿಂದ ಬಂದ್​ ಕರೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಭಾನುವಾರ ಸಂಜೆ ಕರೆದಿದ್ದ ತುರ್ತು ಸಭೆಯಲ್ಲಿ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಬಂದ್​ ವಾಪಸ್​ ಪಡೆಯಲಾಯಿತು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, 'ಹೋರಾಟಗಾರ ಬೇಡಿಕೆಯಂತೆ ಅ.28ರಂದು ಚನ್ನಮ್ಮನ ವಿಜಯೋತ್ಸವದ ಸವಿ ನೆನಪಿಗೆ ರಾಜ್ಯ ಸರ್ಕಾರದಿಂದ ಕಾರ್ಯಕ್ರಮ ಅಯೋಜಿಸಲಾಗುವುದು. ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು, ರೂಪಕಗಳು, ಕಲಾಮೇಳ ಮೆರವಣಿಗೆ, ವಿಚಾರಗೋಷ್ಠಿ, ಸಾಂಸತಿಕ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.

ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಪಂಚಮಸಾಲಿ ಸಮಾಜ ತಾಲೂಕು ಟಕ ಅಧ್ಯ, ಚನ್ನಮ್ಮನ ಸ್ಮರಣೋತ್ಸವ ಸಮಿತಿ ಅಧ್ಯ ಮುರುಗೇಶ ಗುಂಡ್ಲೂರ, ವಕೀಲ ಎ್​.ಎಸ್​.ಸಿದ್ದನಗೌಡರ, ಶಂಕರ ಮಾಡಲಗಿ, ಬಸವರಾಜ ಜನ್ಮಟ್ಟಿ, ಗುರು ಮೆಟಗುಡ್ಡ ಮಾತನಾಡಿದರು.
ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ, ಸಿಪಿಐ ಪಂಚಾರಿ ಸಾಲಿಮಠ, ಶಿವಾನಂದ ಬೆಳಗಾವಿ, ಸುನೀಲ ಪಾಟೀಲ,
ಬಿ.ಬಿ. ಸಂಗನಗೌಡರ, ಮಹಾಂತೇಶ ಅಕ್ಕಿ, ಮಡಿವಾಳಪ್ಪ ಹೋಟಿ, ಗಂಗಪ್ಪ ಗುಗ್ಗರಿ, ಬಾಬುಸಾಬ ಸುತಗಟ್ಟಿ, ಮಹೇಶ ಕೋಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net