ಬೈಲಹೊಂಗಲ ಪಂಚಮಸಾಲಿ ಸಮಾವೇಶಕ್ಕೆ ಸಕಲ ಸಿದ್ಧತೆ

27-5
ಬೈಲಹೊಂಗಲದಲ್ಲಿ ಡಿ.5ರಂದು ಜರುಗಲಿರುವ ಪಂಚಮಸಾಲಿ ಸಮಾವೇಶದ ಸಿದ್ಧತೆಯನ್ನು ಪಂಚಮಸಾಲಿ ಮುಖಂಡರು ಈಚೆಗೆ ಪರಿಶೀಲಿಸಿದರು. ಬಸವರಾಜ ಜನ್ಮಟ್ಟಿ, ಮಹೇಶ ಹರಕುಣಿ , ಶ್ರೀಶೈಲ ಬೋಳನ್ನವರ, ಐ.ಎಲ್.ಪಾಟೀಲ, ಮಹಾಂತೇಶ ತುರಮರಿ ಇತರರಿದ್ದರು.
Published on

ಬೈಲಹೊಂಗಲ, ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗೆ ಒತ್ತಾಯಿಸಿ ಪಟ್ಟಣದ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಡಿ.5 ರಂದು ಬೃಹತ್ ಸಮಾವೇಶ ಜರುಗಲಿದ್ದು, ಸಕಲ ಸಿದ್ಧತೆ ನಡೆಯುತ್ತಿವೆ. ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ ಹಾಗೂ ತಾಲೂಕು ಕಾರ್ಯದರ್ಶಿ ಮಹೇಶ ಹರಕುಣಿ ನೇತೃತ್ವದಲ್ಲಿ ವಿವಿಧ ವ್ಯವಸ್ಥಾಪಕ ಮಂಡಳಿಗಳ ಕಾರ್ಯಕರ್ತರು ಶುಕ್ರವಾರ ಸಮಾವೇಶ ಸ್ಥಳ ಪರಿಶೀಲಿಸಿದರು. ಸಮಾವೇಶಕ್ಕೆ 50 ಸಾವಿರಕ್ಕೂ ಅಧಿಕ ಜನರು ಆಗಮಿಸಲಿದ್ದು, ಬೃಹತ್ ಪೆಂಡಾಲ್, ಊಟ, ಕುಡಿಯುವ ನೀರು, ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಮೆರವಣಿಗೆ ಹಾಗೂ ಕುಂಭಮೇಳ ಅಚ್ಚುಕಟ್ಟಾಗಿ ಮಾಡಲು ವಿವಿಧ ಸಮಿತಿ ರಚಿಸಲಾಗಿದ್ದು, ಈಗಿನಿಂದಲೇ ಕಾರ್ಯಗಳು ಭರದಿಂದ ಸಾಗಿವೆ. ಸಮಾವೇಶದ ಮೂಲಕ ಸರ್ಕಾರಕ್ಕೆ ಚುರುಕು ಮುಟ್ಟಿಸುವಂತಹ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಶ್ರೀಶೈಲ ಬೋಳನ್ನವರ ತಿಳಿಸಿದ್ದಾರೆ. ಐ.ಎಲ್.ಪಾಟೀಲ, ಮಹಾಂತೇಶ ತುರಮರಿ, ವಿಶ್ವನಾಥ ಮೂಗಿ, ಮಹಾಂತೇಶ ಹೊಸೂರ, ಉಳವಪ್ಪ ಬಡ್ಡಿಮನಿ, ಪ್ರಕಾಶ ಕಲ್ಲೋಲಿ, ರಾಜು ಕುಡಸೋಮನ್ನವರ, ಶ್ರೀಕಾಂತ ಮಾಳಕ್ಕನವರ, ಶ್ರೀಶೈಲ ಗೀರನವರ, ಮಲ್ಲಿಕಾರ್ಜುನ ಕಮತಗಿ, ಬಾಳನಗೌಡ ಪಾಟೀಲ, ರಾಜು ರಾಚನ್ನವರ, ಶಿವಪುತ್ರಪ್ಪ ತಟವಟಿ, ಸುಭಾಸ ತುರಮರಿ, ಸಂತೋಷ ಕೊಳವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net