ಬೈಲಹೊಂಗಲ ಜಿಲ್ಲೆಯಾಗಿಸಲಿ

16BLH1
Published on

ಬೈಲಹೊಂಗಲ: ಬ್ರಿಟಿಷ್​ ಆಡಳಿತ ಕಾಲದಿಂದಲೂ ಕಂದಾಯ ಉಪವಿಭಾಗವಾಗಿ ಗುರ್ತಿಸಿಕೊಂಡಿರುವ ಬೆಲಹೊಂಗಲವನ್ನು ಜಿಲ್ಲಾ ಕೇಂದ್ರವನ್ನಾಗಿಸುವಂತೆ ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿ ಮುಖಂಡರು ಪಟ್ಟಣದ ರಾಯಣ್ಣ ವತ್ತದಲ್ಲಿ ಸೋಮವಾರ ರಸ್ತೆ ಸಂಚಾರ ತಡೆ ಹಿಡಿದು ಪ್ರತಿಭಟಿಸಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಹೋರಾಟ ಸಮಿತಿ ಅಧ್ಯ ಶಿವರಂಜನ ಬೋಳಣ್ಣವರ, ಸಿ.ಕೆ. ಮೆಕ್ಕೇದ, ಮಹಾಂತೇಶ ತುರಮರಿ, ವಕೀಲರ ಸಂದ ಅಧ್ಯ ಎಂ.ಆರ್​. ಮೆಳವಂಕಿ, ಹಿರಿಯ ವಕೀಲ ಆರ್​.ಎ. ಪಾಟೀಲ, ಬಿ.ಎಂ. ಚಿಕ್ಕನಗೌಡರ, ರುದ್ರಪ್ಪ ಹೊಸಮನಿ, ಎ್​.ಎಸ್​. ಸಿದ್ದನಗೌಡರ, ಪ್ರೇಮಕ್ಕ ಅಂಗಡಿ ಮಾತನಾಡಿ, ಬೆಳಗಾವಿ ಜಿಲ್ಲೆ ವಿಭಜಿಸುವ ಪ್ರಸ್ತಾವನೆ ಚಾಲನೆ ಪಡೆದಿದ್ದಾಗ, ಅದನ್ನು ಖಡಾಖಂಡಿತವಾಗಿ ವಿರೋಧಿಸಿ ಬೆಳಗಾವಿ ಅಖಂಡವಾಗಿಯೇ ಉಳಿಸಬೇಕೆಂದು ಮನವಿ ಮಾಡಿದ್ದೇವು. ಆದರೆ, ಇತ್ತೀಚೆಗೆ ಆಡಳಿತಾತ್ಮಕ ದಷ್ಟಿಯಿಂದ ಜಿಲ್ಲೆ ವಿಭಜನೆ ಅನಿವಾರ್ಯವಾಗಿದ್ದು, ಉಪವಿಭಾಗ ಕೇಂದ್ರವಾದ ಬೆಲಹೊಂಗಲವನ್ನು ನೂತನ ಜಿಲ್ಲೆಯಾಗಿ ರೂಪಿಸಬೇಕು.

ಪ್ರಸಕ್ತ ಬೆಳಗಾವಿ ಅಧಿವೇಶನದಲ್ಲಿ ಬೆಲಹೊಂಗಲ ಜಿಲ್ಲೆ ೂಷಣೆ ಮಾಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ರಸ್ತೆ ಸಂಚಾರ ತಡೆಯಿಂದ ಪ್ರಯಾಣಿಕರಿಗೆ ಅನನುಕೂಲ: ಒಂದು ಗಂಟೆ ರಸ್ತೆ ಸಂಚಾರ ತಡೆ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಯಿತು. ಸಿಪಿಐ ಪಂಚಾರಿ ಸಾಲಿಮಠ ನೇತತ್ವದಲ್ಲಿ ಬಂದೋಬಸ್ತ್​ ಕೆಗೊಳ್ಳಲಾಗಿತ್ತು. ಸಮಿತಿ ಮುಖಂಡರಾದ ಬಸವರಾಜ ಕೌಜಲಗಿ, ಗುರು ಮೆಟಗುಡ್ಡ, ಮಹೇಶ ಬೆಲ್ಲದ, ಮಲ್ಲಪ್ಪ ಮುರಗೋಡ, ಶಿವಾನಂದ ಬಡ್ಡಿಮನಿ, ಮಹಾಂತೇಶ ಮತ್ತಿಕೊಪ್ಪ, ಮಹೇಶ ಹರಕುಣಿ, ಸುಭಾಸ ತುರಮರಿ, ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಶ್ರೀಶೆಲ ಯಡಳ್ಳಿ, ಪ್ರಕಾಶ ಬಳಿಗಾರ, ಬಾಳಪ್ಪ ಚಳಕೊಪ್ಪ, ಬಿ.ಬಿ.ಗಣಾಚಾರಿ, ವಿರೂಪಾ ಕೋರಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net