ಬೈರಮಂಗಲ ಬಲದಂಡೆ ನಾಲೆಯಲ್ಲಿ ಹರಿದ ನೀರು

28 bidadi photo 1
Published on

ಬಿಡದಿ : ಕೃಷಿ ಚಟುವಟಿಕೆಗಳಿಗೆ ನಾಲೆಗಳ ಮೂಲಕ ನೀರು ಹಾಯಿಸುವ ಬಹುದಿನಗಳ ಕನಸು ನನಸಾಗಿರುವುದು ಸಂತಸ ತಂದಿದೆ ಎಂದು ಶಾಸಕ ಎ.ಮಂಜುನಾಥ್ ಹರ್ಷ ವ್ಯಕ್ತಪಡಿಸಿದರು.

ಬಿಡದಿ ಹೋಬಳಿಯ ಬೈರಮಂಗಲ ಜಲಾಶಯದ ಬಳಿ ಆಧುನೀಕರಣಗೊಂಡಿರುವ ಬಲದಂಡೆ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಗುರುವಾರ ಪೂಜೆ ನೆರವೇರಿಸಿ ವಾತನಾಡಿದರು.

ಬೆಂಗಳೂರು ನಗರ ಪ್ರದೇಶದಿಂದ ಕಲುಷಿತ ನೀರು ವೃಷಭಾವತಿ ನದಿಯಾಗಿ ಹರಿದು ಬೈರಮಂಗಲ ಜಲಾಶಯ ಸೇರುತ್ತಿತ್ತು. ಇದನ್ನು ತಪ್ಪಿಸಿ ನೀರು ಶುದ್ಧೀಕರಿಸಿ ಜಲಾಶಯ ತುಂಬಿಸುವ ಯೋಜನೆ ಕಾರ್ಯ ರೂಪದಲ್ಲಿದ್ದು, ಮಲಿನ ನೀರನ್ನು ಜಲಾಶಯದ ಕೆಳಭಾಗಕ್ಕೆ ನಾಲೆಗಳ ಮೂಲಕ ಬಿಡುವ ಕೆಲಸ ವಾಡಲಾಗುತ್ತಿದೆ. ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳು ಶಿಥಿಲಾವಸ್ಥೆ ತಲುಪಿದ್ದು, ಕೊನೆಯ ಭಾಗದವರಿಗೆ ನೀರು ತಲುಪುತ್ತಿರಲಿಲ್ಲ. ಈ ಹಿಂದೆ ಅಧಿಕಾರ ನಡೆಸಿದವರು ರೈತರ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಎಂದರು.

ಮುಂದಿನ ವಾರ ಎಡದಂಡೆ ನಾಲೆ ಕೆಲಸ ಪೂರ್ಣ:106 ಕೋಟಿ ರೂ.ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಎಡ ಮತ್ತು ಬಲದಂಡೆ ನಾಲೆಗಳ ಆಧುನೀಕರಣ ಕೈಗೆತ್ತಿಕೊಂಡು, ಇದೀಗ ಪೂರ್ಣಗೊಂಡಿರುವ ಬಲದಂಡೆ ನಾಲೆಗೆ ನೀರು ಬಿಡಲಾಗುತ್ತಿದೆ. ಎಡದಂಡೆ ನಾಲೆ ಕೆಲಸ ಪೂರ್ಣಗೊಂಡಿದ್ದು, ಮುಂದಿನ ವಾರ 3 ಅಡಿಯಷ್ಟು ನೀರನ್ನು ನಾಲೆಗೆ ಬಿಡಲಾಗುವುದು. ಎರಡು ನಾಲೆಗಳ ಮೂಲಕ ರೈತರ ಜಮೀನಿಗೆ ನೀರು ತಲುಪುವಂತೆ ತಾಂತ್ರಿಕ ಯೋಜನೆ ರೂಪಿಸಿದ್ದು, ಗುಣಮಟ್ಟದ ಕೆಲಸ ವೇಗವಾಗಿ ನಡೆದಿದೆ ಎಂದು ಮಂಜುನಾಥ್ ತಿಳಿಸಿದರು.

ಬಿಲ್ಲೆದೊಡ್ಡಿ ಭಾಗದಲ್ಲಿ ಅಪೂರ್ಣವಾಗಿರುವ ನಾಲಾ ಆಧುನೀಕರಣ ಕೆಲಸವನ್ನು ತ್ವರಿತ ಮುಗಿಸಲು ಗ್ರಾಮಸ್ಥರು ಮನವಿ ಸಲ್ಲಿಸಿದ್ದು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ನಂತರ ಬೈರಮಂಗಲ ಜಲಾಶಯದ ಕೆರೆ ಏರಿ ಅಭಿವೃದ್ಧಿ, ಸೇತುವೆ ನಿರ್ವಾಣ ಕಾಮಗಾರಿ ಪರಿಶೀಲಿಸಿದರು. ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತ ಕೊಟ್ರೆಶ್, ಜೆಡಿಎಸ್ ಮುಖಂಡರಾದ ಇಟ್ಟಮಡುಸೋಮಣ್ಣ, ಪುಟ್ಟಣ್ಣ, ಸಿದ್ದರಾಜು, ಅಬ್ಬನಕುಪ್ಪೆಚಂದ್ರು, ಧನಂಜಯ್ಯ, ನರಸಿಂಹಯ್ಯ, ಆವರಗೆರೆ ರವಿಕುವಾರ್, ಗೋವಿಂದಯ್ಯ, ಬಿ.ಎಂ.ರಮೇಶ್‌ಕುವಾರ್, ನಾಗರಾಜು, ಗ್ರಾಪಂ ಸದಸ್ಯರಾದ ನಾಗೇಶ್, ಆನಂದ್, ರವಿಕುವಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net