ಬೈತೂರು ವಾರ್ಷಿಕ ಹಬ್ಬ ಆಚರಣೆ

23 gkp 01
Published on

ಗೋಣಿಕೊಪ್ಪ: ಕೊಡಗು ದೈವಗಳ ಮೂಲ ಸ್ಥಾನ ಬೈತೂರು ವಾರ್ಷಿಕ ಹಬ್ಬ ಆಚರಿಸಲಾಯಿತು.

ಆಚರಣೆಯಂತೆ ಪುಗ್ಗೇರ ಕುಟುಂಬದಿಂದ ಅಕ್ಕಿ ಅಳ್‌ಪೊ ಶಾಸ್ತ್ರದ ಮೂಲಕ ಧಾರ್ಮಿಕ ವಿಧಿ-ವಿಧಾನವನ್ನು ಭಾನುವಾರ ನಡೆಸಲಾಯಿತು.
ಎತ್ತ್ ಪೋರಾಟದ ಮೂಲಕ ದೇವಸ್ಥಾನವನ್ನು 3 ಸುತ್ತು ಪ್ರದಕ್ಷಿಣೆ ನಡೆಸಲಾಯಿತು. ನಂತರ ಅನ್ನದಾನಕ್ಕೆ ಬೇಕಾಗುವ ಅಕ್ಕಿಯನ್ನು ಅಳೆದು ನೀಡುವ ಅಕ್ಕಿ ಅಳ್‌ಪೊ ಕಾರ್ಯ ನಡೆಸಲಾಯಿತು. ಪುಗ್ಗೇರ ಕುಟುಂಬಸ್ಥರು ಭಾಗಿಯಾದರು.

ಜ.22ರಂದು ಎಟ್ಟೂಟ್ ಆಚರಣೆ ನಡೆಯಿತು. ತಕ್ಕ ಪುಗ್ಗೇರ ಪಿ.ಪೊನ್ನಪ್ಪ, ಕುಟುಂಬದ ಸದಸ್ಯರು ಭಾಗಿಯಾದರು. ಜನವರಿ 25 ರಂದು ದೊಡ್ಡ ಹಬ್ಬ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net