ಬೈಕ್‌ಗೆ ಟಿಪ್ಪರ್ ಡಿಕ್ಕಿ, ಓರ್ವ ಸಾವು

19102020 Kudligi Accident
Published on

ಘಟಪ್ರಭಾ: ಕಲ್ಲೋಳಿ ಪಟ್ಟಣದ ಹೊರವಲಯದಲ್ಲಿ ಬುಧವಾರ ಸಂಜೆ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬೈಕ್ ಸವಾರ ಗಾಯಗೊಂಡಿದ್ದಾನೆ.

ಗೋಕಾಕದ ಶಕೀಲಖಾನ್ ಗೌಸಖಾನ್ ಜಮಾದಾರ (55) ಮೃತಪಟ್ಟ ವ್ಯಕ್ತಿ. ಇಸ್ಮಾಯಿಲ್ ಜಮಾದಾರ (51) ಗಾಯಗೊಂಡ ವ್ಯಕ್ತಿ. ಮೂಡಲಗಿಯಿಂದ ಗೋಕಾಕಕ್ಕೆ ಬೈಕ್‌ನಲ್ಲಿ ಇಬ್ಬರು ತೆರಳುತ್ತಿದ್ದಾಗ, ಕಲ್ಲೋಳಿ ಸಮೀಪ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದಿದೆ.

ಹಿಂಬದಿ ಕುಳಿತಿದ್ದ ಶಕೀಲ್‌ಖಾನ್ ತಲೆ ಮೇಲೆ ಟಿಪ್ಪರ್ ಹಾದು ಹೋಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟಿಪ್ಪರ್ ಚಾಲಕ ಪರಾರಿಯಾಗಲು ಪ್ರಯತ್ನಿಸಿದ್ದು, ಸ್ಥಳದಲ್ಲಿದ್ದವರು ಹಿಂಬಾಲಿಸಿ ಕಲ್ಲೋಳಿ ಪಟ್ಟಣದ ಹೊರಗಡೆ ತಡೆದಿದ್ದಾರೆ. ಆದರೂ ಚಾಲಕ ನಾಪತ್ತೆಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net