ಬೈಕ್‌ ಹತ್ತಿ ಒತ್ತುವರಿ ಕೆರೆ ವೀಕ್ಷಿಸಿದ ಕಲಬುರಗಿ ಡಿಸಿ ಗುರುಕರ್

IMG-20221015-WA0040
Published on

ಕಲಬುರಗಿ: ಗ್ರಾಮ ವಾಸ್ತವ್ಯ ಅಹವಾಲು ಆಲಿಸುವ ಸಂದರ್ಭದಲ್ಲಿ ಬಹುತೇಕ ಗ್ರಾಮಸ್ಥರು ಗ್ರಾಮದಲ್ಲಿ 32 ಎಕರೆ ಕೆರೆ ಪ್ರದೇಶ ಒತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಮಧ್ಯಾಹ್ನ ವಸತಿ ಶಾಲೆಯಲ್ಲಿ ಊಟ ಸವಿದ ಜಿಲ್ಲಾಧಿಕಾರಿಗಳು ಕೆರೆ ಒತ್ತುವರಿ ಜಾಗ ವೀಕ್ಷಣೆಗೆ ವಾಹನ ಹತ್ತಿ ಹೊರಟರು. ಅಧಿಕಾರಿ-ಗ್ರಾಮಸ್ಥರು ಹಿಂಬಾಲಿಸಿದರು.

ಕೆರೆ ಜಮೀನು ಪ್ರದೇಶ ಮುಖ್ಯ ರಸ್ತೆಯಿಂದ ಅರ್ಧ ಕಿ.ಮೀ. ಒಳಗಡೆ ಇದ್ದ ಕಾರಣ ಮತ್ತು ಈ ರಸ್ತೆ ಎತ್ತಿನ ಚಕಡಿ ರಸ್ತೆಯಾಗಿದ್ದರಿಂದ ಇಲ್ಲಿ ಕಾರು ಚಲಿಸುವಂತಿರಲಿಲ್ಲ. ಹೀಗಾಗಿ ತಮ್ಮ ಕಾರಿನಿಂದ ಇಳಿದ ಡಿ.ಸಿ. ಯಶವಂತ ವಿ. ಗುರುಕರ್ ಸ್ಥಳೀಯರೊಬ್ಬರ ಬೈಕ್ ಹತ್ತಿ ಕೆರೆ ಒತ್ತುವರಿ ಪ್ರದೇಶ ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net