ಬೈಕ್​ಗಳ ಪರಸ್ಪರ ಡಿಕ್ಕಿ, ಇಬ್ಬರ ಸಾವು

Capture
Published on

ಚಿಟಗುಪ್ಪ: ನಿರ್ಣಾ-ಮುತ್ತಂಗಿ ರಸ್ತೆಯಲ್ಲಿ ಭಾನುವಾರ ಎರಡು ಬೈಕ್​ಗಳ ಮಧ್ಯೆ ಪರಸ್ಪರ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಬಸಿರಾಪುರ ಗ್ರಾಮದ ಸಂಜಪ್ಪ (28), ನಿರ್ಣಾ ಗ್ರಾಮದ ಸಂತೋಷ ತುಕಾರಾಮ(18) ಮೃತರು. ಗಾಯಗೊಂಡವರನ್ನು ಬೀದರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಸಿಪಿಐ ಅಮೂಲ್ ಕಾಳೆ, ಪಿಎಸ್ಐ ಸುದರ್ಶನರಡ್ಡಿ ಭೇಟಿ ನೀಡಿದ್ದು, ಮನ್ನಾಎಖೇಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಕ್ಕಿ ರಭಸಕ್ಕೆ ಬೈಕ್​ಗಳು ನಜ್ಜುಗುಜ್ಜಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net