

ಹೊಸಪೇಟೆ: ಹಂಪಿ ಉತ್ಸವದ ಜಾಗೃತಿ ಮೂಡಿಸಲು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ವರೆಗೆ ಬೈಕ್ ರ‍್ಯಾಲಿ ನಡೆಯಿತು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ರ‍್ಯಾಲಿಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಬೈಕ್ ರ‍್ಯಾಲಿ ಸಾಯಿಬಾಬಾ ವೃತ್ತ, ಎಪಿಎಂಸಿ ರಸ್ತೆ, ಸರ್ಕಾರಿ ಆಸ್ಪತ್ರೆ, ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಪುನೀತ್ ರಾಜಕುಮಾರ್ ವೃತ್ತ, ಹಂಪಿ ರಸ್ತೆ ಮಾರ್ಗವಾಗಿ ತಾಲೂಕಿನ ಕಡ್ಡಿರಾಂಪುರ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ತಲುಪಿತು. ರ‍್ಯಾಲಿಯಲ್ಲಿ ನೂರಾರು ಯುವಕರು ಬಾಗವಹಿಸಿದರು.
ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಉಪವಿಭಾಗಿಯಾಧಿಕಾರಿ ವಿವೇಕಾನಂದ, ತಹಸೀಲ್ದಾರ್ ಶೃತಿ ಮಳಪ್ಪಗೌಡ್ರ, ಕೃಷಿ ಜೆಡಿ ಶರಣಪ್ಪ ಮುದುಗಲ್, ತೋಟಗಾರಿಕೆ ಜೆಡಿ ಚದಾನಂದ ಪೂಜಾರ್, ಪ್ರವಾಸೋದ್ಯಮ ಡಿಡಿ ಪ್ರಭುಲಿಂಗ ತಳಕೆರಿ ಇತರರಿದ್ದರು.