ಬೈಕ್ಗೆ ಅಡ್ಡ ಬಂದ ನಾಯಿ ಬಚಾವ್ ಮಾಡಲು ಹೋಗಿ ಯುವಕ ಸಾವು

Capture
Published on

ರಾದ್: ಜೊನ್ನೇಕೇರಿ ಹತ್ತಿರ ಭಾನುವಾರ ರಾತ್ರಿ ಅಡ್ಡ ಬಂದ ನಾಯಿ ಬಚಾವ್ ಮಾಡಲು ಹೋದ ಯುವಕನೊಬ್ಬ ಬೈಕ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾನೆ. ಜೋಜನಾದ ಸಾಗರ ಆರ್.ಕೌಟಗೆ(25) ಮೃತಪಟ್ಟವ. ಔರಾದ್ನಿಂದ ಸ್ವಗ್ರಾಮಕ್ಕೆ ಬರುತ್ತಿರುವಾಗ ಜೊನ್ನೇಕೇರಿ ಹತ್ತಿರ ಬೈಕ್ ಸ್ಕಿಡ್ ಆಗಿದ್ದು, ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಮೃತನ ಸಂಬಂಧಿ ನೀಡಿದ ದೂರಿನನ್ವಯ ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net