ಬೈಕ್‌ಗಳ ಡಿಕ್ಕಿ ಎಲೆಕ್ಟ್ರಿಷಿಯನ್ ಸಾವು

bike accident 1
Published on

ಮೈಸೂರು: ಶ್ರೀರಾಂಪುರ ರಿಂಗ್ ರಸ್ತೆ ಬಳಿ ಎರಡು ಬೈಕ್‌ಗಳು ಡಿಕ್ಕಿಯಾಗಿ ಎಲೆಕ್ಟ್ರಿಷಿಯನ್‌ಮಂಗಳವಾರ ಮೃತಪಟ್ಟಿದ್ದಾರೆ.

ಬೋಗಾದಿ 2ನೇ ಹಂತ, ರಾಜಾಜಿನಗರ ನಿವಾಸಿ ಎಂ.ಚಂದ್ರು(51) ಮೃತರು. ಇವರ ತಾಯಿ ಮಹದೇವಮ್ಮ(75), ಮತ್ತೊಂದು ಬೈಕ್‌ನ ಸವಾರ ಪುಟ್ಟರಾಜು ಅವರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎಲೆಕ್ಟ್ರಿಷಿಯನ್ ಆಗಿದ್ದ ಚಂದ್ರ ತಮ್ಮ ತಾಯಿ ಅವರೊಂದಿಗೆ ಬೈಕ್‌ನಲ್ಲಿ ನಾಚನಹಳ್ಳಿ ಪಾಳ್ಯದ ಕಡೆಯಿಂದ ಶ್ರೀರಾಂಪುರ ರಿಂಗ್ ರಸ್ತೆ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭ ಪುಟ್ಟರಾಜು ಅವರ ಸ್ಕೂಟರ್ ಡಿಕ್ಕಿಯಾಗಿದೆ.

ಘಟನೆಯಲ್ಲಿ ಮೂವರೂ ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಎಲ್ಲರನ್ನೂ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ತೀವ್ರ ಪೆಟ್ಟು ಬಿದ್ದಿದ್ದ ಚಂದ್ರು ಬದುಕುಳಿಯಲಿಲ್ಲ. ಕೆ.ಆರ್.ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net