ಬೈಕ್​ ಸವಾರಿ ವೇಳೆಯೇ ಸರಗಳ್ಳತನ

Crime Logo
Published on

ಕಲಬುರಗಿ: ಬೈಕ್​ ಮೇಲೆ ಹೊರಟಿದ ಮಹಿಳೆಯ ಕೊರಳಲ್ಲಿ ಇದ್ದ ಸರವನ್ನು ಬೈಕ್​ ಮೇಲೆಯೇ ಬಂದ ಆಗಂತುಕರು ಕಳ್ಳತನ ಮಾಡಿಕೊಂಡು ಹೋದ ಟನೆ ನಗರದಲ್ಲಿ ನಡೆದಿದೆ. ನಗರದ ಓಜಾ ಲೇಔಟ್​ ನಿವಾಸಿ, ಶಿಕ್ಷಕಿ ಸುಮಾ ಭಗವತಿ ಅವರ ಸರ ಕಳ್ಳತನ ಮಾಡಲಾಗಿದೆ. ಬುಧವಾರ ರಾತ್ರಿ 9ಗಂಟೆ ವೇಳೆಗೆ ನಗರದ ಓಜಾ ಲೇಔಟ್​ನ ಮನೆಗೆ ಹೋಗಲು ನ್ಯೂ ಜೇವರ್ಗಿ ರಸ್ತೆಯ ರೈಲ್ವೆಯ ಮೇಲ್ಸೇತುವೆ ಮೇಲೆ ಬೈಕ್​ ಮೇಲೆ ಹೋಗುವಾಗ ಬೈಕ್​ ಮೇಲೆ ಬಂದ ಇಬ್ಬರು ಆಗಂತುಕರು ಕೊರಳಿಗೆ ಕೈ ಹಾಕಿ, 75 ಸಾವಿರ ರೂ. ಮೌಲ್ಯದ 7.5 ಗ್ರಾಂ ಬಂಗಾರದ ಸರ ಕಿತ್ತುಕೊಂಡು ಹೋಗಿದ್ದಾರೆ. ಈ ಕುರಿತು ಸ್ಟೇಷನ್​ ಬಜಾರ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net