ಬೈಕ್ ಸವಾರರನ್ನು ಅಡ್ಡಗಟ್ಟಿ 1.50 ಕೋಟಿ ರೂ.ದರೋಡೆ

Crime scene
Published on

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಈಚಲನಾಗೇನಹಳ್ಳಿ ಬಳಿ ಐವರು ದುಷ್ಕರ್ಮಿಗಳ ತಂಡವೊಂದು ಬೈಕ್ ಸವಾರರಿಬ್ಬರನ್ನು ಅಡ್ಡಗಟ್ಟಿ ಅವರ ಬಳಿ ಇದ್ದ 1.50 ಕೋಟಿ ರೂ.ನಗದು ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಹೊಸಹಳ್ಳಿ ನಿವಾಸಿ ಮಹಮ್ಮದ್‌ಇರ್ಫಾನ್‌ಉಲ್ಲಾ, ತನ್ನ ಸ್ನೇಹಿತ ಝಾಕೀರ್‌ನೊಂದಿಗೆ, ತನ್ನಣ್ಣ ಮಹಮ್ಮದ್ ಸಮೀವುಲ್ಲಾಗೆ ಅಡಕೆ ವಹಿವಾಟಿಗೆ ಸಂಬಂಧಿಸಿದಂತೆ ಬರಬೇಕಿದ್ದ ಹಣವನ್ನು ಪಡೆಯಲು, ಹೈದರಾಬಾದ್‌ಗೆ ತೆರಳಿ ಅಲ್ಲಿಂದ ಚಿತ್ರದುರ್ಗಕ್ಕೆ ಡಿ.4ರಂದು ಹಿಂತಿರುಗಿದ್ದಾರೆ.
ಚಿತ್ರದುರ್ಗದಿಂದ ಬೈಕ್‌ನಲ್ಲಿ ಊರಿಗೆ ತೆರಳುತ್ತಿದ್ದಾಗ ಈಚಲನಾಗೇನಹಳ್ಳಿ ಸಮೀಪದಲ್ಲಿ ಕಾರು ಮತ್ತು ಬೈಕ್‌ನಲ್ಲಿ ಹಿಂಬಾಲಿಸಿದ್ದ ದು ಷ್ಕರ್ಮಿಗಳು, ಸವಾರರಿಬ್ಬರನ್ನು ತಡೆದು ಅವರಿಗೆ ಚಾಕು ತೋರಿಸಿ,ಹಣವಿದ್ದ ಬ್ಯಾಗ್‌ಗಳನ್ನು ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂ ದಿದೆ. ಮಹಮದ್ ಇರ್ಫಾನ್ ನೀಡಿದ ದೂರನ್ನು ದಾಖಲಿಸಿಕೊಂಡು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net