ಬೈಕ್ ವ್ಹೀಲಿಂಗ್‌ನಿಂದ ಡಿಕ್ಕಿಯಾಗಿ ಶಿಕ್ಷಕಿಗೆ ತೀವ್ರ ಗಾಯ

12
Published on

ಮೈಸೂರು: ನಗರದಲ್ಲಿ ಬೈಕ್ ವ್ಹೀಲಿಂಗ್ ಮಾಡುವ ವೇಳೆ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕಿಯೊಬ್ಬರಿಗೆ ತೀವ್ರವಾಗಿ ಗಾಯವಾಗಿದೆ

.
ಪೊಲೀಸ್ ಪಬ್ಲಿಕ್ ಸ್ಕೂಲ್‌ನ ವಿಜ್ಞಾನ ಶಿಕ್ಷಕಿ ಎಚ್.ಬಿ.ಅನಿತಾ ಗಾಯಗೊಂಡವರು. ಜು. 18ರಂದು ಶಾಲೆಯಿಂದ ಮನೆಗೆ ವಾಪಸ್ ಹೋಗುವ ಸಂದರ್ಭದಲ್ಲಿ ಗಾಯತ್ರಿಪುರಂ ಚರ್ಚ್ ಬಳಿ ಕೆಟಿಎಂ ಬೈಕ್‌ನಲ್ಲಿ ಬಂದ ತ್ರಿಬಲ್ ರೈಡಿಂಗ್ ಸವಾರರು ವ್ಹೀಲಿಂಗ್ ಮಾಡಿಕೊಂಡು ಅನಿತಾ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆಸಿದ್ದಾರೆ. ಪರಿಣಾಮ, ಅವರ ತಲೆಗೆ ಗಾಯವಾಗಿ ರಕ್ತಸ್ರಾವವಾಗಿದು, ಜ್ಞಾನ ತಪ್ಪಿ ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.


ಅಪಘಾತದ ಬಳಿಕ ಸವಾರರು ಸ್ಥಳದಲ್ಲೇ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಕುರುಬರಹಳ್ಳಿಯ ಆದಿತ್ಯ ಹೆಸರಿನಲ್ಲಿ ಬೈಕ್ ನೋಂದಣಿ ಆಗಿದೆ. ಪತಿ ಎಚ್.ಎಸ್.ಶಿವಕುಮಾರ್ ಗುರುವಾರ ನೀಡಿದ ದೂರು ಆಧರಿಸಿ ಸಿದ್ಧಾರ್ಥನಗರ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net