ಬೈಕ್ ಮೇಲಿಂದ ಬಿದ್ದು ಇಬ್ಬರ ಸಾವು

5NPN3
Published on

ನಿಪ್ಪಾಣಿ: ಟೈಯರ್ ಪಂಕ್ಚರ್ ಆಗಿ ನಿಯಂತ್ರಣ ತಪ್ಪಿ ಬಿದ್ದು ಇಬ್ಬರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ತಾಲೂಕಿನ ಕುರ್ಲಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಲಕ್ಷ್ಮೀ ಆನಂದ ಕೊಪ್ಪದ (25) ಹಾಗೂ ಭಾಗ್ಯಶ್ರೀ ಸಾಗರ ವಾಕ್ಮಿ (13) ಮೃತರು. ಭಾಗ್ಯಶ್ರೀ ಸ್ಥಳದಲ್ಲಿ ಮೃತಪಟ್ಟರೆ, ಲಕ್ಷ್ಮೀ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಕುರ್ಲಿ ಗ್ರಾಮದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ದ್ವಿಚಕ್ರ ವಾಹನದ ಹಿಂದಿನ ಗಾಲಿ ಪಂಕ್ಚರ್ ಆಗಿ ಸವಾರನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಗಾಯಾಳು ಹನುಮಂತ ವೆಂಕಪ್ಪ ಸಕ್ರಿ ಹಾಗೂ ಮಾರುತಿ ರಮೇಶ ಚುನಾಮದಾರ ಅವರಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net