ಬೈಕ್​ ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಸಾವು

accident-15
Published on

ರಾಮದುರ್ಗ: ಎರಡು ಬೈಕ್​ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಟನೆ ತಾಲೂಕಿನ ಚಿಕ್ಕೊಪ್ಪ ಕೆ.ಎಸ್​. ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ರಾಮದುರ್ಗ ಸಾರಿಗೆ ಟಕದಲ್ಲಿ ಬಸ್​ ಚಾಲಕನಾದ ರವಿಶಂಕರ ಭೀಮರಾಯಪ್ಪ ಬೆಟಗೇರಿ (45) ಮೃತ. ಹಿಂಬದಿ ಸವಾರ ಕುಶಾಲ ದೇವೇಂದ್ರಪ್ಪ ಬಡಿಗೇರ (45) ಹಾಗೂ ಇನ್ನೊಂದು ಬೈಕ್​ ಸವಾರ ಬಾಳಪ್ಪ ದೇಸಾಯಿ (28) ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರೂ ಚಿಕ್ಕೊಪ್ಪ ಗ್ರಾಮದವರು. ಈ ಕುರಿತು ಕಟಕೋಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net