

ಕೊಳವಿ: ಸಮೀಪದ ಹೂಲಿಕಟ್ಟಿ&ಮಮದಾಪುರ ಕ್ರಾಸ್ನಲ್ಲಿ ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಟನೆ ಬುಧವಾರ ನಡೆದಿದೆ. ಹೂಲಿಕಟ್ಟಿ ಗ್ರಾಮದ ನಿವಾಸಿ ಲಕ್ಷ$್ಮಪ್ಪ ಸಿದ್ರಾಮಪ್ಪ ಬೆಕ್ಕನವರ (68) ಮೃತ ಸವಾರ. ಲಕ್ಷ$್ಮಪ್ಪ ಹೂಲಿಕಟ್ಟಿಯಿಂದ ತನ್ನ ಜಮೀನು ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಮಮದಾಪುರ ಕ್ರಾಸ್ನಿಂದ ಕೊಳವಿ ಗ್ರಾಮಕ್ಕೆ ತೆರಳುತ್ತಿದ್ದ ಮತ್ತೋಂದು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದಿದೆ. ಈ ವೇಳೆ ಗಾಯಗೊಂಡ ಲಕ್ಷ$್ಮಪ್ಪ ಬೆಕ್ಕನವರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.