ಬೈಕ್ ಮತ್ತು ಟಾಟಾ ಎಸಿ ವಾಹನದ ನಡುವೆ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ

ಬೈಕ್ ಮತ್ತು ಟಾಟಾ ಎಸಿ ವಾಹನದ ನಡುವೆ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ
Published on

ಅರಕಲಗೂಡು: ತಾಲೂಕಿನ ಮಾದಿಹಳ್ಳಿ ಕಾಲನಿ ಬಳಿ ಮಂಗಳವಾರ ಹಾಸನ- ಪಿರಿಯಾಪಟ್ಟಣ ಮಾರ್ಗದ ರಸ್ತೆಯಲ್ಲಿ ಬೈಕ್ ಮತ್ತು ಟಾಟಾ ಎಸಿ ವಾಹನದ ನಡುವೆ ಡಿಕ್ಕಿ ಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೊಡಗು ಜಿಲ್ಲೆ ಸಿದ್ದಾಪುರ ಗ್ರಾಮದ ಪರಶುರಾಮ (40), ಉಮರ್ (38) ಮೃತರು.


ಉಳುಕು ತೆಗೆಸಿಕೊಳ್ಳಲು ಅರಕಲಗೂಡಿಗೆ ಬಂದಿದ್ದ ಇಬ್ಬರು ಊರಿಗೆ ಸ್ಕೂಟಿ ಬೈಕ್ ನಲ್ಲಿ ವಾಪಾಸ್ಸಾಗುತ್ತಿದ್ದ ಇಬ್ಬರು ರಸ್ತೆ ಉಬ್ಬಿನ ಬಳಿ ರಾಮನಾಥಪುರ ಕಡೆಯಿಂದ ಬರುತ್ತಿದ್ದ ಟಾಟಾ ಎಸಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇಬ್ಬರಿಗೂ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವ ವಾಗಿ ಮೃತಪಟ್ಟಿದ್ದಾರೆ.


ಅರಕಲಗೂಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net