ಬೈಕ್ ಬಾಕ್ಸಿನಲ್ಲಿಟ್ಟಿದ್ದ 1 ಲಕ್ಷ ಹಣ ಕಳವು

Thief
Published on

ಹಾಸನ: ಅರಕಲಗೂಡು ಪಟ್ಟಣದಲ್ಲಿ ಬೈಕಿನ ಬಾಕ್ಸ್‌ನಲ್ಲಿ ಇಟ್ಟಿದ್ದ 1 ಲಕ್ಷ ಹಣವನ್ನು ಖದೀಮರು ಶನಿವಾರ ಕಳ್ಳತನ ಮಾಡಿದ್ದಾರೆ.

ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ಕರಹಳ್ಳಿ ಹೋಬಳಿಯ ಕೆ. ರಮೇಶ್ ಅವರು ಶನಿವಾರ ಬೆಳಗ್ಗೆ ಅರಕಲಗೂಡು ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಲ್ಲಿ 1,00,000 ಹಣ ಡ್ರಾ ಮಾಡಿ ಪರ್ಸಿನಲ್ಲಿಟ್ಟು, ಬೈಕಿನ ಬಾಕ್ಸಿನೊಳಗಡೆ ಇಟ್ಟುಕೊಂಡಿದ್ದಾರೆ. ನಂತರ ಕರ್ಣಾಟಕ ಬ್ಯಾಂಕ್ ಹತ್ತಿರದ ಕೆನರಾ ಬ್ಯಾಂಕ್ ಎಟಿಎಂನಲ್ಲಿ 10,000 ಹಣವನ್ನು ಡ್ರಾ ಮಾಡಲು ಹೋಗಿದ್ದ ಸಮಯದಲ್ಲಿ ಬೈಕಿನ ಬಾಕ್ಸ್ ಒಳಗಡೆ ಪರ್ಸಿನಲ್ಲಿಟ್ಟಿದ್ದ 1,00,000 ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಈ ಸಂಬಂಧ ರಮೇಶ್ ಅವರು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net