ಬೈಕ್ ನಲ್ಲಿ ಹಂಪ್ಸ್ ನೆಗೆಸಿ ಮಹಿಳೆ ಸಾವು

Accident Bike
Published on

ಚನ್ನರಾಯಪಟ್ಟಣ:ತಾಲೂಕಿನ ಶೆಟ್ಟಿಹಳ್ಳಿ ಡೈರಿಗೆ ಕೆಲಸಕ್ಕೆಂದು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ನ ಹಿಂಬದಿ ಕುಳಿತಿದ್ದ ಮಹಿಳೆ ಹಂಪ್ಸ್ ನೆಗೆಸಿದ ಪರಿಣಾಮ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

ತಾಲೂಕಿನ ಮರಿಶೆಟ್ಟಿಹಳ್ಳಿ ಗ್ರಾಮದ ಮಂಜುಳಾ (52) ಎಂಬುವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.ಶೆಟ್ಟಿಹಳ್ಳಿ ಡೈರಿಗೆ ಕೆಲಸಕ್ಕೆ ಹೋಗಲು ಶನಿವಾರ ಬೆಳಗ್ಗೆ 6:15ರ ಸಮಯದಲ್ಲಿ ಚಂದ್ರೇಗೌಡ ಎಂಬುವರ ಬೈಕ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಗೌಡಗೆರೆ ಸಮೀಪ ಹೋಗುತ್ತಿದಾಗ ಚಾಲಕ ಅಜಾಗರೂಕತೆ ಮತ್ತು ಅತಿ ವೇಗದಿಂದ ಬೈಕ್ ಓಡಿಸಿದ ಹಂಪ್ಸ್ ನೆಗೆಸಿದ ಪರಿಣಾಮ ಮಹಿಳೆ ಕೆಳಗೆ ಬಿದ್ದಿದ್ದಾರೆ.

ತಲೆ,ದೇಹ, ಕಿವಿಗೆ ತೀವ್ರ ಪೆಟ್ಟು ಬಿದ್ದು ರಕ್ತ ಗಾಯಗಳಾಗಿದ್ದ, ಮಹಿಳೆಯನ್ನು ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆದರೆ ವೈದ್ಯರು ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಪಟ್ಟಣದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net