ಬೈಕ್ ನಡುವೆ ಅಪಘಾತ ವ್ಯಕ್ತಿ ಸಾವು

IMG-20250215-WA0012
Published on

ಬೈಕ್ ನಡುವೆ ಅಪಘಾತ ವ್ಯಕ್ತಿ ಸಾವು

ಹನೂರು: ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಬೈಕಲ್ಲಿ ನಡುವೆ ಡಿಕ್ಕಿ ಸಂಭವಿಸಿದ್ದು, ಒರ್ವ ಮೃತಪಟ್ಟರೆ, ಮತ್ತೊಬ್ಬ ಗಾಯಗೊಂಡಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಇಕ್ಕಡಹಳ್ಳಿ ಗ್ರಾಮದ ದೊರೆಸ್ವಾಮಿ (30), ಹನೂರು ಪಟ್ಟಣದ ಸಂಜಯ್ (25) ಗಾಯಗೊಂಡವರು.

ಪಟ್ಟಣದಲ್ಲಿ ರಾತ್ರಿ 10:45ರ ವೇಳೆಯಲ್ಲಿ ಇಕ್ಕಡಹಳ್ಳಿ ಗ್ರಾಮದ ದೊರೆಸ್ವಾಮಿ ಎಂಬುವರು ಬೈಕ್ ನಲ್ಲಿ ಕಾರ್ಯನಿಮಿತ್ತ ಹನೂರಿಗೆ ಆಗಮಿಸಿದ್ದು, ಗ್ರಾಮಕ್ಕೆ ಹಿಂತಿರುತ್ತಿದ್ದರು. ಈ ವೇಳೆ ಎದುರು ಬಂದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಇಬ್ಬರು ತೀವ್ರ ಗಾಯಗೊಂಡರು. ಸ್ಥಳೀಯರು ಇಬ್ಬರನ್ನು ತುರ್ತು ವಾಹನದಲ್ಲಿ ಮೈಸೂರು ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಆದರೆ ದೊರೆಸ್ವಾಮಿ ಎಂಬವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಮತ್ತೋರ್ವ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net