

ಕೊಳ್ಳೇಗಾಲ: ಪಟ್ಟಣದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬ್ರದರನ್ ಚರ್ಚ್ ವೃತ್ತ ಸಮೀಪದ ಮೀನಿನ ಮಳಿಗೆ ಬಳಿ ರಸ್ತೆಯಲ್ಲಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟಿದ್ದಾನೆ.
ಹನೂರು ತಾಲೂಕಿನ ಉದ್ದನೂರು ಗ್ರಾಮದ ್ಜವರ ನಾಯಕ(42) ಮೃತ್ತ ದುರ್ದೈವಿ. ಅಪಘಾತದಲ್ಲಿ ಬೈಕ್ ಸವಾರ ಮಹಮ್ಮದ್ ನಾಶೀರ್ ಗಾಯಗೊಂಡಿದ್ದಾನೆ. ಜವರನಾಯಕ ಕೆಲಸದ ನಿಮ್ಮಿತ್ತ ಪಟ್ಟಣಕ್ಕೆ ಆಗಮಿಸಿದ್ದು, ನಡೆದುಕೊಂಡು ಹೋಗುವಾಗ ಎಡಿಬಿ ವೃತ್ತದಿಂದ ಐಬಿ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಾದಚಾರಿಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಆತನನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.