ಬೈಕ್​ ಡಿಕ್ಕಿಯಲ್ಲಿಟ್ಟ ರು.2.20 ಲಕ್ಷ ಕಳವು

Crime Logo
Published on

ಕಲಬುರಗಿ: ಬೈಕ್​ ಡಿಕ್ಕಿಯಲ್ಲಿಟ್ಟಿದ್ದ ೨.೫೦ ಲಕ್ಷ ರೂ. ಕಳ್ಳತನ ಮಾಡಿದ ಟನೆ ನಗರದ ಗಣೇಶ ನಗರದಲ್ಲಿ ನಡೆದಿದೆ. ಉಪನ್ಯಾಸಕ ಬಸಯ್ಯ ಮಠ ಹಣ ಕಳೆದುಕೊಂಡವರು. ಬ್ಯಾಂಕ್​ನಲ್ಲಿ ಜಮಾ ಮಾಡಲು ಸಾಲ ತಂದಿದ್ದ ಹಣವನ್ನು ಬೈಕ್​ ಡಿಕ್ಕಿಯಲ್ಲಿಟ್ಟು ತಮ್ಮ ಕೋಚಿಂಗ್​ ಸೆಂಟರ್​ಗೆ ತೆರಳಿದ್ದು, ಒಂದು ಗಂಟೆ ನಂತರ ಬೈಕ್​ ಬಳಿ ಬಂದಾಗ ಡಿಕ್ಕಿ ತೆರೆದಿದ್ದು, ಒಳಗಿದ್ದ ಹಣ ಕಾಣಿಸಿಲ್ಲ. ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಎಂ.ಬಿ.ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net