ಬೈಕ್ ಚಾಲಕ ಸಾವು

Published on

ಕೊಟ್ಟೂರು: ತಾಲೂಕಿನ ಚಿನ್ನೇನಹಳ್ಳಿ ಬಳಿ ಆಟೋ-ಬೈಕ್ ಡಿಕ್ಕಿಯಾಗಿ ಬೈಕ್ ಚಾಲಕ ಮೃತಪಟ್ಟಿದ್ದಾರೆ.

ಮನೋಜ್ ನಾಯ್ಕ(32) ಮೃತ. ಮಡ್ರಹಳ್ಳಿ ಗ್ರಾಮದ ರಥೋತ್ಸವ ಮುಗಿಸಿಕೊಂಡು ವಾಪಸ್ ಮೋತಿಕಲ್ಲು ತಾಂಡಾಕ್ಕೆ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ.

ಬೈಕ್‌ನಲ್ಲಿ ಬರುತ್ತಿದ್ದ ಮನೋಜ್ ನಾಯ್ಕಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟುಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕೊಟ್ಟೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಟೋ ಚಾಲಕನ ಪತ್ತೆಗೆ ಶೋಧ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net