

ಕಲಬುರಗಿ: ಮನೆಗೆ ಕಿರಾಣಿ ಸಾಮಗ್ರಿ ತರಲು ಅಂಗಡಿಗೆ ತೆರಳುವ ವೇಳೆ ಬೈಕ್ ಗುದ್ದಿ ನಗರದ ಬಸವೇಶ್ವರ ನಗರದ ರಸ್ತೆಯಲ್ಲಿ ಐದು ವರ್ಷದ ಬಾಲಕಿ ಮಧು ರಾಜು ಮೃತಪಟ್ಟ ಟನೆ ನಡೆದಿದೆ. ಬೈಕ್ ಗುದ್ದಿದ್ದಕ್ಕೆ ಗಂಭಿರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಬೈಕ್ ಚಾಲಕ ಪಟ್ಟಣ ಗ್ರಾಮದ ಗುರುಶರಣ ವಿರುದ್ಧ ಸಂಚಾರ ಠಾಣೆ&1ರಲ್ಲಿ ಪ್ರಕರಣ ದಾಖಲಾಗಿದೆ.