ಕೊಳ್ಳೇಗಾಲ: ತಾಲೂಕಿನ ಕಾಮಗೆರೆ ಗ್ರಾಮದ ರಸ್ತೆಯ ಹೋಲಿಕ್ರಾಸ್ ಆಸ್ಪತ್ರೆಯ ಬಳಿ ಬೈಕ್ ನಲ್ಲಿ ಬಿದ್ದು ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ ಗುರುವಾರ ಮೃತಪಟ್ಟಿದ್ದಾನೆ.
ಯಳಂದೂರು ಬನ್ಸಿಸಾರಿಗೆ ಗ್ರಾಮದ ರವಿಕುಮಾರ್(36) ಎಂಬಾತ ಮೃತಪಟ್ಟ ದುರ್ದೈವಿ. ಈತ ಕೊಳ್ಳೇ ಗಾಲ ದಲ್ಲಿ ಚಿನ್ನದ ಆಚಾರಿ ವೃತ್ತಿ ಮಾಡುತ್ತಿದ್ದ. ಕೆಲಸದ ನಿಮ್ಮಿತ್ತ ಬುಧವಾರ ಬೈಕ್ ನಲ್ಲಿ ಹನೂರಿಗೆ ತೆರಳಿ ಹಿಂದಿರುಗುವಾಗ ರಾತ್ರಿ 8.30 ವೇಳೆಯಲ್ಲಿ ಕಾಮಗೆರೆ ಗ್ರಾಮದ ಹೋಲಿಕ್ರಾಸ್ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಬೈಕ್ ಯಿಂದ ಬಿದ್ದು ತೀವ್ರವಾಗಿ ಗಾಯ ಗೊಂಡಿದ್ದನು. ತಕ್ಷಣ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸು ದಾರರಿಗೆ ಒಪ್ಪಿಸಿದ್ದಾರೆ.