ಬೈಕ್ ಅಡ್ಡಗಟ್ಟಿ ಸುಲಿಗೆ

Crime Logo
Published on

ಹುಬ್ಬಳ್ಳಿ: ತಾಲೂಕಿನ ಬುಡರಶಿಂಗಿ ಬಳಿ ರಸ್ತೆ ನಡುವೆ ವ್ಯಕ್ತಿಯೊಬ್ಬರ ಬೈಕ್ ಅಡ್ಡಗಟ್ಟಿ ಬೆದರಿಸಿ ಮೊಬೈಲ್, 4500 ರೂ. ನಗದು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ರಸೂಲ್​ಸಾಬ್ ನದಾಫ್ ಅವರು, ‘ನಾನು ಅದರಗುಂಚಿಯಿಂದ ಮಿಶ್ರಿಕೋಟಿಗೆ ಹೊರಟಿದ್ದೆ. ಬುಡರಶಿಂಗಿ ಬಳಿ ರಸ್ತೆಯಲ್ಲಿ ನಾಲ್ವರು ಬೈಕ್ ಅಡ್ಡಗಟ್ಟಿ ಕಿಸೆಗೆ ಕೈ ಹಾಕಿ ಮೊಬೈಲ್, ನಗದು ಕಿತ್ತುಕೊಂಡು ಹೋಗಿದ್ದಾರೆ. ಅವರು ತಬರೇಜ್, ಇರ್ಫಾನ್, ಮಿಲಾಲ್, ಆಸಿಫ್ ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದರು’ ಎಂದು ತಿಳಿಸಿದ್ದಾರೆ.

ಕೀಲಿ ಮುರಿದು ಕಳ್ಳತನ: ತಾರಿಹಾಳ ಗ್ರಾಮದ ವಾಜಪೇಯಿ ನಗರದ ಅರ್ಜುನ ಶಿವಪುತ್ರಪ್ಪ ಅಂಗಡಿ ಎಂಬುವರ ಮನೆಯ ಕೀಲಿ ಮುರಿದು ಟ್ರೆಜರಿಯಲ್ಲಿದ್ದ 23,500 ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net