ಬೈಕಿಗೆ ಕಾರ್ ಡಿಕ್ಕಿ: ಸವಾರ ಸ್ಥಳದಲ್ಲಿಯೇ ಸಾವು

ಬೈಕಿಗೆ ಕಾರ್ ಡಿಕ್ಕಿ: ಸವಾರ ಸ್ಥಳದಲ್ಲಿಯೇ ಸಾವು
Published on

ಆಲೂರು: ವೇಗವಾಗಿ ಬಂದ ಕಾರು ಎದುರಿಗೆ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75 ಆಲೂರು ತಾಲ್ಲೂಕು, ಮಾವನೂರು ಗ್ರಾಮದ ಹತ್ತಿರ ಸೋಮವಾರ ಸಂಜೆ ನಡೆದಿದೆ.
     ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ಹೊಸಕೆರೆ ಗ್ರಾಮದ ಜಗದೀಶ್ ಅವರ ಮಗ ವಿನೋದ್ ಕುಮಾರ್ (22) ಮೃತ ದುರ್ದೈವಿ.
ಪದವಿ ಶಿಕ್ಷಣ ಮುಗಿಸಿದ ವಿನೋದ್ ಹಾಸನದ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ಸಂಜೆ ಹಾಸನದಿಂದ ಸ್ವಗ್ರಾಮಕ್ಕೆ ಹಿಂದಿರುಗುವ ವೇಳೆ ಎದುರಿನಿಂದ ಅತಿ ವೇಗವಾಗಿ ಅಜಾಗ್ರತೆಯಿಂದ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ವಿಷಯ ತಿಳಿದ ಪೋಷಕರು, ಸ್ನೇಹಿತರು ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net