ಬೇಸಿಗೆ ಶಿಬಿರದ ಕಲಿಕೆ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ

zp1 (1)---02
Published on


ಚಿತ್ರದುರ್ಗ: ಬೇಸಿಗೆ ಶಿಬಿರ ಮಕ್ಕಳ ಜ್ಞಾನಾರ್ಜನೆಗೆ ಬುನಾದಿ ಎಂದು ಜಿಪಂ ಸಿಇಒ,ಜಿಲ್ಲಾ ಬಾಲಭವನ ಸಮಿತಿ ಅಧ್ಯಕ್ಷ ಎಂ.ಎಸ್.ದಿವಾಕರ ಹೇಳಿದರು.

ನಗರದ ಜಿಲ್ಲಾ ಬಾಲಭವನದಲ್ಲಿ ಸೋಮವಾರ ರಾಜ್ಯಬಾಲ ಭವನ ಸೊಸೈಟಿ,ಜಿಪಂ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾ ಬಾಲ ಭವನ ಸಮಿತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ಶಿಬಿರ ದಲ್ಲಿ ಕಲಿತಿರುವ ಪಠ್ಯೇತರ ಚಟುವಟಿಕೆಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗುತ್ತವೆ.

ಒಳ್ಳೆಯ ನಡೆ,ನುಡಿಗಳನ್ನು ಶಿಬಿರಗಳು ಕಲಿಸುತ್ತವೆ.ರಜೆ ಮುಕ್ತಾಯವಾಗಿ ಶಾಲೆಗಳು ಪ್ರಾರಂಭವಾಗಿವೆ. ವಿಶೇಷವಾಗಿ ಪ್ರೌಢಶಾಲೆ ವಿದ್ಯಾರ್ಥಿ ಗಳು ಓದಿನೆಡೆ ಹೆಚ್ಚಿನ ಆಸಕ್ತಿ ವಹಿಸಿ ಉತ್ತಮ ಫಲಿತಾಂಶವನ್ನು ಪಡೆಯಬೇಕು. ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯವೆಂದರು. ಮಕ್ಕಳೊ ಂದಿಗೆ ಶಿಬಿರದ ಕುರಿತಂತೆ ಸಂವಾದ ನಡೆಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಮಾತನಾಡಿ,ಕಲೆಗೆ ಇಂದು ಮಾನ್ಯತೆ ಸಿಗುತ್ತಿದೆ. ರಿಯಾ ಲಿಟಿ ಶೋಗಳಲ್ಲೂ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳಿವೆ. ಈ ಶಿಬಿರ ಮಕ್ಕಳಲ್ಲಿರುವ ಕಲಾವಂತಿಕೆಯ ಪರಿಪೂರ್ಣತೆ ಸಹಕಾರಿಯಾಗಿದೆ. ಜಿಲ್ಲಾ ಬಾಲಭವನ ಸಮಿತಿ ಪ್ರತಿ ವರ್ಷ ಏರ್ಪಡಿಸುವ ಶಿಬಿರದಲ್ಲಿ ಪಠ್ಯೇತರ ಚಟುವಟಿಕೆಗಳೊಂದಿಗೆ ಪಠ್ಯ ಪೂರಕ ಚಟುವಟಿಕೆಗಳಿಗೂ ಆದ್ಯತೆ ನೀಡ ಲಾಗುತ್ತಿದೆ ಎಂದರು.

ಜಿಲ್ಲಾ ನಿರೂಪಣಾಧಿಕಾರಿಗಳಾದ ಕೆಂಪಹನುಮಯ್ಯ ಪ್ರಾಸ್ತವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಕಾರ‌್ಯಕ್ರಮ ಹಾಗೂ ಶಿಬಿರದಲ್ಲಿ ರಚಿಸಿದ ಚಿತ್ರ ಕಲೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ,ಬಾಲಕಿಯರ ಬಾಲಮಂದಿರದ ಅ ಧೀಕ್ಷಕಿ ಸುನಿತಾ,ಜಿಲ್ಲಾ ಬಾಲ ಭವನದ ವ್ಯವಸ್ಥಾಪಕ ರಜಾಕ್‌ಸಾಬ್,ಕಾರ‌್ಯಕ್ರಮ ಸಂಯೋಜಕ ಡಿ.ಶ್ರೀಕುಮಾರ್,ಸಂಪನ್ಮೂಲ ವ್ಯಕ್ತಿಗಳಾದ ಕೆ. ಪವಿತ್ರ,ಅನಿತಾಮಹಾಂತೇಶ್, ಜಯಶೀಲಾವಿಶ್ವನಾಥ್, ರಮೇಶ್,ತಿಪ್ಪೇಸ್ವಾಮಿ,ರವಿಅಂಬೇಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net