ಬೇಸಿಗೆ ಶಿಬಿರ

Summer-Camp
Published on

ಚಿತ್ರದುರ್ಗ: ವಾಸವಿ ವಿದ್ಯಾಸೊಸೈಟಿ, ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಫಸ್ಟ್ ಸ್ಟೆಫ್ ಡ್ಯಾನ್ಸ್ ಟ್ರಸ್ಟ್‌ನಿಂದ ಉಚಿತ ಬೇಸಿಗೆ ಶಿಬಿರ ಏ.1ರಿಂದ 10 ರವರೆಗೆ ನಗರದ ವಾಸವಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. 5 ರಿಂದ 15 ವರ್ಷ ವಯಸ್ಸಿನೊಳಗಿರುವ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಡ್ಯಾನ್ಸ್, ಆಟಗಳು, ಚಿತ್ರಕಲೆ, ಟೈಕೊಂಡೋ, ಸಂಗೀತ, ನಾಟಕಗಳನ್ನು ಕಲಿಸಲಾಗುವುದು. ಟ್ರಕ್ಕಿಂಗ್, ಬೆಂಕಿ ಇಲ್ಲದೆ ಅಡುಗೆ ತಯಾರಿಸುವುದು ಹಾಗೂ ಫ್ಯಾಷನ್‌ಶೋ ನಡೆಸಲಾಗುವುದು. ಪ್ರತಿ ದಿನ ಬೆಳಗ್ಗೆ 10 ರಿಂದ 1.30ವರೆಗೆ ಈ ಶಿಬಿರ ನಡೆಯಲಿದೆ. ಏ.2ರಂದು ಬೇಸಿಗೆ ಶಿಬಿರ ಉದ್ಘಾಟನೆಯಾಗಲಿದೆ. ವಿಶೇಷ ಯೋಗ ಶಿಕ್ಷಣ ತಜ್ಞ ಡಾ. ಸೋಮಶೇಖರ್ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net