ಬೇಸಿಗೆ ರಜೆ ಸದುಪಯೋಗ ಮಾಡಿಕೊಳ್ಳಿ

08 KAMPLI 03
Published on

ಕಂಪ್ಲಿ: ಸಮುದಾಯದತ್ತ ಶಾಲಾ ಕಾರ್ಯಕ್ರಮ ವಿದ್ಯಾರ್ಥಿ, ಶಿಕ್ಷಕ ಮತ್ತು ಪಾಲಕರ ನಡುವೆ ಸಂಪರ್ಕ ಕಲ್ಪಿಸುವ ಮೂಲಕ ಶಿಕ್ಷಣದ ಗುಣಮಟ್ಟ ಸುಧಾರಣೆಯ ಉದ್ದೇಶ ಹೊಂದಿದೆ ಎಂದು ಸಿಆರ್‌ಪಿ ಚಂದ್ರಯ್ಯ ಸೊಪ್ಪಿಮಠ ಹೇಳಿದರು.

ನಗರದ ಶಾರದಾ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಮಕ್ಕಳಲ್ಲಿ ಕಲಿಕಾಸಕ್ತಿಯನ್ನುಂಟು ಮಾಡಿ ಮುಖ್ಯವಾಹಿನಿಗೆ ಕರೆತರುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲಾಗುವುದು. ಮಕ್ಕಳು ಬೇಸಿಗೆ ರಜೆ ದಿನಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಜಾಗ್ರತೆ ವಹಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಫಲಿತಾಂಶ ಪಟ್ಟಿ, ಉತ್ತರ ಪತ್ರಿಕೆ, ಕ್ರೋಡೀಕೃತ ಅಂಕ ವಹಿ ಹಾಗೂ ಮಕ್ಕಳ ಇತರ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಲಾಯಿತು. ಮುಖ್ಯಶಿಕ್ಷಕ ಆರ್.ಬಸವರಾಜ, ಶಿಕ್ಷಕರಾದ ಅನ್ನದಾನೇಶ, ಎ.ಜಿ.ತಿಪ್ಪೇಸ್ವಾಮಿ, ಪಾರ್ವತಿ, ಎಸ್.ಡಿ.ಎಂ.ಸಿ ಸದಸ್ಯರು, ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net