

ಕಲಬುರಗಿ: ಗುಲ್ಬರ್ಗ ವಿವಿಯ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪದವಿ ಕಾಲೇಜು ಅಧ್ಯಾಪಕರಿಗೆ ಬೇಸಿಗೆ ರಜೆ ನೀಡಲು ಆಗ್ರಹಿಸಿ ಹೈದರಾಬಾದ್ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದಿAದ ಪ್ರತಿಭಟನೆ ನಡೆಸಲಾಯಿತು.
ಗುವಿವಿ ಆಡಳಿತ ಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಕುಲಪತಿ ಪ್ರೊ.ದಯಾನಂದ ಅಗಸರಗೆ ಮನವಿ ಸಲ್ಲಿಸಲಾಯಿತು.
ಅಧ್ಯಾಪಕರರಿಗೆ ಮಧ್ಯಂತರ, ಬೇಸಿಗೆ ಸೇರಿ ಯಾವುದೇ ರಜೆಗಳು ದೊರೆಯದೇ ಮಾನಸಿಕ ಒತ್ತಡದಲ್ಲಿದ್ದಾರೆ. ಇದರಿಂದ ಬೋಧನಾ ಸಾಮರ್ಥ್ಯ, ಉನ್ನತ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ರಾಜ್ಯದ ಬೇರೆ ಬೇರೆ ವಿವಿಗಳು ಅಧ್ಯಾಪಕರಿಗೆ ಬೇಸಿಗೆ ರಜೆ ನೀಡಿದ್ದಾರೆ. ಆದರೆ ಗುವಿವಿ ನೀಡಿಲ್ಲ. ಕೂಡಲೇ ರಜೆ ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಕಾಲೇಜುಗಳ ಕಟ್ಟಡಗಳು ಚುನಾವಣೆಗಾಗಿ ಬಳಸುತ್ತಿದ್ದು, ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿಲ್ಲ. ೨, ನಾಲ್ಕನೇ ಸೆಮಿಸ್ಟರ್ ಪೂರ್ಣಗೊಳಿಸಲಾಗಿದೆ. ವಿವಿಯ ಅಕಾಡೆಮಿಕ್ ಕ್ಯಾಲೆಂಡರ್ ಹಾಗೂ ಪರೀಕ್ಷಾ ವಿಭಾಗದ ತಾಳಮೇಳವಿಲ್ಲದಕ್ಕೆ ವಿಶೇಷ ರಜೆಗಳು ಮುಗಿದಿವೆ. ವಿವಿ ಕ್ಯಾಲೆಂಡರ್ ಆಫ್ ಇವೆಂಟ್ ಸಿದ್ಧಪಡಿಸುವಾಗ ಕಡ್ಡಾಯ ರಜೆ ಅವಧಿ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.
ಮೌಲ್ಯಮಾಪನ ಕುಲಸಚಿವೆ ಡಾ.ಮೇಧಾವಿನಿ ಕಟ್ಟಿ, ಹಣಕಾಸು ಅಧಿಕಾರಿ ಗಾಯಿತ್ರಿ, ಸಂಘದ ಅಧ್ಯಕ್ಷ ಡಾ.ನೀಲಕಂಠ ಕಣ್ಣಿ, ಡಾ.ಜಗನ್ನಾಥ ತಳವಾರ, ಪಂಡಿತ ಬಿ.ಕೆ, ಡಾ.ಶರಣಪ್ಪ ಗುಂಡಗುರ್ತಿ, ಡಾ.ಶರಣಪ್ಪ ಸೈದಾಪುರ, ಡಾ.ಮಾರುತಿ ಮಾರಪಳ್ಳಿ, ಡಾ.ವೆಂಕಟೇಶ ಪೂಜಾರಿ, ಡಾ.ಲಕ್ಷö್ಮಣ ಬೋಸ್ಲೆ, ಡಾ.ಅಂಬರಾಯ ಹಾಗರಗಿ, ಡಾ.ದಯಾನಂದ ಇತರರಿದ್ದರು.